ಹಿರಿಯ ನಟಿ ಜಮುನಾ ನಿಧನ

Prasthutha|

ಬೆಂಗಳೂರು: ದಕ್ಷಿಣ ಭಾರತದ ಹಿರಿಯ ನಟಿ ಜಮುನಾ ಶುಕ್ರವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

- Advertisement -


ಹಂಪಿಯಲ್ಲಿ ವ್ಯಾಪಾರಿ ಮನೆತನದಲ್ಲಿ ಹುಟ್ಟಿದ್ದ ನಟಿ ಜಮುನಾ ಅವರು ಹೈದರಾಬಾದ್’ನ ತನ್ನ ಸ್ವಂತ ಮನೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ.


1953ರಲ್ಲಿ ತೆಲುಗು ಪುಟ್ಟಿಲ್ಲು ಮೂಲಕ ನಟಿಯಾದ ಜಮುನಾ ಪಂಚ ಭಾಷಾ ಚಿತ್ರ ನಟಿ. ಕನ್ನಡದಲ್ಲಿ ರಾಜಕುಮಾರರಿಗೆ ನಾಯಕಿಯಾಗಿ ಭೂಕೈಲಾಸ, ಸಾಕ್ಷಾತ್ಕಾರಗಳಲ್ಲಿ ನಟಿಸಿದ್ದ ಅವರು ಕನ್ನಡದಲ್ಲಿ ನಟಿಸಿದ ಚಿತ್ರಗಳ ಸಂಖ್ಯೆ ಕಡಿಮೆ.

- Advertisement -


ರಾಜಕೀಯ ಪ್ರವೇಶಿಸಿ ರಾಜಮಂಡ್ರಿಯಿಂದ ಒಮ್ಮೆ ಸಂಸದೆ ಆಗಿದ್ದ ಅವರು ಸೋತ ಬಳಿಕ ರಾಜಕೀಯ ಬಿಟ್ಟಿದ್ದರು. ಮಗಳೊಂದಿಗೆ ಹೈದರಾಬಾದಿನಲ್ಲಿ ವಾಸವಿದ್ದರು.



Join Whatsapp