ಕುರ್ ಆನ್ ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ: ಸಚಿವೆ ಶಶಿಕಲಾ ಜೊಲ್ಲೆ

Prasthutha|

ಇತರ ಧರ್ಮಗಳ ವಿರುದ್ಧ ದ್ವೇಷ ಭಾವನೆಗಳನ್ನು ತುಂಬುವಂತಹ ಪಾಠಗಳನ್ನು ಮದ್ರಸಾಗಳಲ್ಲಿ ಕಲಿಸಲಾಗುತ್ತಿಲ್ಲ

- Advertisement -

ಮದ್ರಸಾಗಳಲ್ಲಿ ಕಲಿತವರು ದೇಶದ ಆಸ್ತಿ ಪಾಸ್ತಿಗಳನ್ನು ನಾಶ ಪಡಿಸಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ

ಬೆಂಗಳೂರು: ಕುರ್ ಆನ್ ನಲ್ಲಿರುವ ವಾಕ್ಯಗಳು ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿಲ್ಲ. ಕುರ್ ಆನ್ ನಲ್ಲಿರುವ ವಾಕ್ಯಗಳನ್ನು ಅವುಗಳ ಹಿನ್ನೆಲೆಯೊಂದಿಗೆ ಧಾರ್ಮಿಕ ವಿದ್ವಾಂಸರು ಮಾತ್ರ ಅರ್ಥೈಸಬಹುದಾಗಿದೆ ಎಂದು ಮುಜರಾಯಿ ಹಾಗೂ ಹಜ್ ಮತ್ತು ವಕ್ಫ್ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

- Advertisement -

ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಎನ್.ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಮದ್ರಸಾಗಳಲ್ಲಿ 3ರಿಂದ 10 ವರ್ಷದೊಳಗಿನ ಮಕ್ಕಳಲ್ಲಿ ಸಮಾಜದ ಇತರ ಧರ್ಮಗಳ ವಿರುದ್ಧವಾದ ದ್ವೇಷ ಭಾವನೆಗಳನ್ನು ತುಂಬುವಂತಹ ಪಾಠಗಳನ್ನು ಕಲಿಸುವುದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗವುಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿಲ್ಲ. ಬಂದಲ್ಲಿ ಕಾನೂನಿನ ಅನ್ವಯ ಕ್ರಮ ಜರಗಿಸಲಾಗುವುದು ಎಂದು ಸಚಿವರು ತಿಳಿಸಿದರು.

ಮದ್ರಸಾಗಳಲ್ಲಿ ಇಂತಹ ಶಿಕ್ಷಣವನ್ನು ಅತೀ ಸಣ್ಣ ವಯಸ್ಸಿನಲ್ಲೇ ಪಡೆಯುವ ಮಕ್ಕಳು ಸಮಾಜ ಕಂಟಕರಾಗಿ ದೇಶದ ಆಸ್ತಿ ಪಾಸ್ತಿಗಳನ್ನು ನಾಶ ಪಡಿಸುವಲ್ಲಿ ಪ್ರಮುಖರಾಗಿರುವುದು ಸರ್ಕಾರಕ್ಕೆ ಗಮನಕ್ಕೆ ಬಂದಿದೆಯೇ? ಇಂತಹ ಮದ್ರಸಾಗಳ ಕುರಿತು ಅದರಲ್ಲಿರುವ ಶಿಕ್ಷಕರ ಕುರಿತು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂಬ ಎನ್.ರವಿಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿದ, ಸಚಿವೆ ಶಶಿಕಲಾ ಜೊಲ್ಲೆ, ಮದ್ರಸಾಗಳಲ್ಲಿ ಇಂತಹ ಶಿಕ್ಷಣವನ್ನು ಅತೀ ಸಣ್ಣ ವಯಸ್ಸಿನಲ್ಲೇ ಪಡೆಯುವ ಮಕ್ಕಳು ಸಮಾಜ ಕಂಟಕರಾಗಿ ದೇಶದ ಆಸ್ತಿ ಪಾಸ್ತಿಗಳನ್ನು ನಾಶ ಪಡಿಸುವಲ್ಲಿ ಪ್ರಮುಖರಾಗಿರುವುದು ಸರ್ಕಾರ ಗಮನಕ್ಕೆ ಬಂದಿಲ್ಲ. ಬಂದಲ್ಲಿ ಕಾನೂನಿನನ್ವಯ ಕ್ರಮ ಜರಗಿಸಲಾಗುವುದು ಎಂದು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.



Join Whatsapp