ಕರ್ನಾಟಕ ಹೈಕೋರ್ಟಿನ ತೀರ್ಪು ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವ ಸಾರ್ವತ್ರಿಕ ಹಕ್ಕಿನ ವಿರುದ್ಧದ ಒಂದು ಹೊಡೆತ: CPIM

Prasthutha|

ನವದೆಹಲಿ: ತರಗತಿಗಳಲ್ಲಿ ಹಿಜಾಬ್ ಬಳಕೆಯನ್ನು ನಿಷೇಧಿಸುವ ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿರುವ ಕರ್ನಾಟಕ ಹೈಕೋರ್ಟಿನ ತೀರ್ಪು ತಾರತಮ್ಯವಿಲ್ಲದೆ ಶಿಕ್ಷಣ ಪಡೆಯುವ  ಸಾರ್ವತ್ರಿಕ ಹಕ್ಕಿನ ವಿರುದ್ಧದ ಒಂದು ಹೊಡೆತವಾಗಿದೆ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ)  ಪಾಲಿಟ್ ಬ್ಯರೊ ಹೇಳಿದೆ.

- Advertisement -

ಭಾರತದ ಹಲವು ರಾಜ್ಯಗಳಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳು ಧರಿಸುವ ಶಿರವಸ್ತ್ರವನ್ನು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಎಂದೂ ಸಾಮಾನ್ಯ ಸಮವಸ್ತ್ರದ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗಿಲ್ಲ. ಅತ್ಯುತ್ತಮ ಉದಾಹರಣೆಯೆಂದರೆ, ನೆರೆಯ ಕೇರಳದಲ್ಲಿ – ಶಾಲೆಗಳಲ್ಲಿ ಮತ್ತು ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಮುಸ್ಲಿಮ್ ಹುಡುಗಿಯರು ಅತಿ ಹೆಚ್ಚು ಭಾಗವಹಿಸುವ ದಾಖಲೆಯನ್ನು ಹೊಂದಿರುವ ರಾಜ್ಯವದು.

ಆದರೆ, ಈ ತೀರ್ಪು ಶಾಸಕರ ನೇತೃತ್ವದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿನ ಸಮಿತಿಗಳಿಗೆ ಈ ಬಗ್ಗೆ ನಿರ್ಧರಿಸುವ ಹಕ್ಕನ್ನು ನೀಡುತ್ತದೆ. ಕರ್ನಾಟಕದಲ್ಲಿ ಈ ಶಾಸಕರು ತಮ್ಮದೇ ಆದ ಸಂಕುಚಿತ ಅಜೆಂಡಾಗಳನ್ನು ಮತ್ತು ಪೂರ್ವಗ್ರಹಗಳನ್ನು ಹೊಂದಿರಬಹುದು. ಈ ಅಜೆಂಡಾ ಕೋಮು ಧ್ರುವೀಕರಣದ ಬಿಜೆಪಿಯ ಒಟ್ಟಾರೆ ನಿಲುವಿಗೆ ಸರಿಹೊಂದುತ್ತದೆ ಎಂದು ನೋಡುವಾಗ, ಕರ್ನಾಟಕ ಹೈಕೋರ್ಟ್ ತೀರ್ಪು ಭಾರತದಾದ್ಯಂತ ಅಪಾಯಕಾರಿ ಸರಣಿ ಪರಿಣಾಮವನ್ನು ಬೀರಬಹುದು ಎಂದು ಸಿಪಿಐ(ಎಂ) ಪಾಲಿಟ್ ಬ್ಯುರೊ ಸಂದೇಹ ವ್ಯಕ್ತಪಡಿಸಿದೆ.

- Advertisement -

ಸುಪ್ರೀಂ ಕೋರ್ಟ್ ವಿಳಂಬ ಮಾಡದೆ ಮೇಲ್ಮನವಿಗಳ ವಿಚಾರಣೆ ನಡೆಸಬೇಕು ಎಂದಿರುವ ಪೊಲಿಟ್ಬ್ಯುರೊ, ದೇಶದ ಅತ್ಯುಚ್ಚ ನ್ಯಾಯಾಲಯವು ಸಾಂವಿಧಾನಿಕ ಖಾತರಿಗಳನ್ನು ಎತ್ತಿಹಿಡಿಯುತ್ತದೆ ಮತ್ತು ನ್ಯಾಯವನ್ನು ನೀಡುತ್ತದೆ ಎಂದು ಆಶಿಸಿದೆ.



Join Whatsapp