ನವದೆಹಲಿ : ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಟ್ವಿಟರ್ ಖಾತೆಯ ವೆರಿಫೈಡ್ ಬ್ಯಾಜ್ ತೆಗೆದು ಹಾಕಿದ ಕೆಲವೇ ಗಂಟೆಗಳಲ್ಲಿ ಮತ್ತೆ ಮರುಸ್ಥಾಪಿಸಲಾಗಿದೆ.
ವೆಂಕಯ್ಯ ನಾಯ್ಡು ಅವರ ವೈಯಕ್ತಿಕ ಟ್ವಿಟರ್ ಖಾತೆಯ ಬ್ಲೂಟಿಕ್ ತೆಗೆಯಲಾಗಿತ್ತು. ಇದಕ್ಕೆ ಬಿಜೆಪಿ ಮುಖಂಡರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಎರಡು ಗಂಟೆಗಳಲ್ಲಿ ಟ್ವಿಟರ್ ವೆಂಕಯ್ಯ ನಾಯ್ಡು ಖಾತೆಗೆ ಬ್ಲೂ ಟಿಕ್ ಬ್ಯಾಜ್ ಮರುಸ್ಥಾಪಿಸಿದೆ.
ಕೇಂದ್ರದ ಬಿಜೆಪಿ ಸರಕಾರದ ಹೊಸ ಐಟಿ ನಿಯಮಗಳ ವಿರುದ್ಧ ಸಾಮಾಜಿಕ ಜಾಲತಾಣ ವೇದಿಕೆಗಳು ಸಂಘರ್ಷಕ್ಕಿಳಿದಿರುವ ಹೊತ್ತಲ್ಲೇ ಇಂತದ್ದೊಂದು ಪ್ರಕ್ರಿಯೆ ನಡೆದಿದ್ದುದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.