ಜೈಲಿನಲ್ಲಿ ವೀರಪ್ಪನ್ ಸಹಚರ ಮೀಸೆ ಮಾದಯ್ಯ ಸಾವು

Prasthutha|

ಮೈಸೂರು: ಕೇಂದ್ರ ಕಾರಾಗೃಹದಲ್ಲಿದ್ದ ವೀರಪ್ಪನ್ ಸಹಚರ ಮೀಸೆ ಮಾದಯ್ಯ (72) ಸಾವನ್ನಪ್ಪಿದ್ದಾರೆ.

- Advertisement -


ಸುಮಾರು 29 ವರ್ಷದಿಂದ ಜೈಲಿನಲ್ಲಿದ್ದ ಮಾದಯ್ಯ, ಬಟ್ಟೆ ತೊಳೆಯುವಾಗ ಜಾರಿಬಿದ್ದಿದ್ದಾರೆ ಎಂದು ತಿಳಿದು ಬಂದಿದ್ದು, ತಕ್ಷಣ ಕೆ.ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದಾರೆ.


ಮೀಸೆ ಮಾದಯ್ಯನಿಗೆ ಪಾಲಾರ್ ಬಾಂಬ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವದಿ ಶಿಕ್ಷೆಯಾಗಿತ್ತು. ವೀರಪ್ಪನ್ ಇನ್ನುಳಿದ ಸಹಚರರಾದ ಸೈಮನ್, ಬಿಲವೇಂದ್ರನ್, ಮೀಸೆ ಮಥಾಯನ್ ಜೈಲಿನಲ್ಲಿರುವಾಗಲೇ ಸಾವನ್ನಪ್ಪಿದ್ದರು. ಮಾದಯ್ಯ ಕೂಡ ಹೀಗೇ ಮೃತಪಟ್ಟಿದ್ದಾರೆ.



Join Whatsapp