ಸಂಸ್ಕೃತಿ ಹೇರಿಕೆಯ ವಿರುದ್ಧ ತಮಿಳು ನಾಯಕರ ಆಕ್ರೋಶ

Prasthutha|

ಚೆನ್ನೈ: ತನ್ನ ಪ್ರಾದೇಶಿಕ ಚಾನೆಲ್ ಗಳಿಗೆ ಪ್ರತಿ ದಿನ 15 ನಿಮಿಷಗಳ ಸಂಸ್ಕೃತ ನ್ಯೂಸ್ ಬುಲೆಟಿನ್ ಪ್ರಸಾರಮಾಡಬೇಕೆಂದು ಪ್ರಸಾರ ಭಾರತಿಯು ನಿರ್ದೇಶನವನ್ನು ಹೊರಡಿಸಿರುವುದು ತಮಿಳುನಾಡಿನಲ್ಲಿ ಹೊಸಸುತ್ತಿನ ವಿವಾದವೊಂದಕ್ಕೆ ಕಾರಣವಾಗಿದೆ.

- Advertisement -

ಡಿ.ಎಂ.ಕೆ ಅಧ್ಯಕ್ಷ ಸ್ಟಾಲಿನ್, ವಿಸಿಕೆ ಸಂಸದ ಡಿ.ರವಿಕುಮಾರ್, ಸಿಪಿಐ (ಮಾರ್ಕ್ಸಿಸ್ಟ್) ನ ಸಂಸದ ಎಸ್.ವೆಂಕಟೇಶನ್ ಮತ್ತು ಎಂಡಿಎಂಕೆ ನಾಯಕ ವೈಕೊ ಒಳಗೊಂಡಂತೆ ಹಲವು ನಾಯಕರು ಸಂಸ್ಕೃತಿ ಹೇರಿಕೆಯನ್ನು ಖಂಡಿಸಿದ್ದಾರೆ ಮತ್ತು ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದಾರೆ.

ಇದು ಪ್ರಸಾರ ಭಾರತಿ ಕಾಯ್ದೆಯ ಉದ್ದೇಶದ ವಿರುದ್ಧವಾಗಿದೆ” ಎಂದು ರವಿಕುಮಾರ್ ಹೇಳಿದ್ದಾರೆ. “ 2011ರ ಜನಗಣತಿಯ ಪ್ರಕಾರ ತಮಿಳುನಾಡಿನಲ್ಲಿ 803 ಮಂದಿ ಸಂಸ್ಕೃತಿ ಮಾತನಾಡುತ್ತಾರೆ. ನೀವು ಅವರಿಗಾಗಿ ಬುಲೆಟಿನ್ ಪ್ರಸಾರ ಮಾಡಿದರೆ, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ದಿಲ್ಲಿ, ಗುಜರಾತ್ ಮತ್ತು ಇತರೆಡೆಗಳಲ್ಲಿ ನೆಲೆಸುತ್ತಿರುವ ಹತ್ತಾರು ಸಾವಿರಾರು ಮಂದಿ ತಮಿಳರಿಗಾಗಿ ಯಾಕಾಗಿ ಪ್ರಸಾರಮಾಡುವುದಿಲ್ಲ. ಉತ್ತರ ಪ್ರದೇಶದಲ್ಲಿ ಸಂಸ್ಕೃತ ಮಾತನಾಡುವ ಅತ್ಯಧಿಕ ಜನರಿರುವ ಸ್ಥಳ. ಆ ರಾಜ್ಯದಲ್ಲೂ ತಮಿಳು ಮಾತನಾಡುವವರ ಸಂಖ್ಯೆ ಅದಕ್ಕಿಂತ ಹೆಚ್ಚಿದೆ” ಎಂದು ಅವರು ಹೇಳಿದ್ದಾರೆ.



Join Whatsapp