ವಾರಣಾಸಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಗೋಡೆ ಬರಹ ಬರೆದಿದ್ದಕ್ಕಾಗಿ ವಾರಾಣಸಿ ಪೊಲೀಸರು ಐದು ಜನರನ್ನು ಬಂಧಿಸಿದ್ದಾರೆ.
ಸಿಸಿಟಿವಿ ಕ್ಯಾಮರಾಗಳಿಂದ ಪಡೆದ ದೃಶ್ಯಾವಳಿಗಳ ಆಧಾರದ ಮೇಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಪೊಲೀಸ್ ಠಾಣೆಯ ಗೋಡೆಗಳ ಮೇಲೆ ಮೋದಿ – ಯೋಗಿ ವಿರುದ್ಧ ಗೋಡೆ ಬರಹಗಳನ್ನು ಬರೆಯುತ್ತಿದ್ದಾಗ ಪೊಲೀಸರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿರುವುದು ಆಶ್ಚರ್ಯಕರವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆ ಬರಹಗಳನ್ನು ಅಳಿಸಿ ಹಾಕಿಸಿದ್ದಾರೆ.
ಪೊಲೀಸರು ಮತ್ತು ಗುಪ್ತಚರ ಅಧಿಕಾರಿಗಳು ಈ ಆರೋಪಿಗಳು ಯಾವುದಾದರು ಸಂಘಟನೆ ನಂಟು ಹೊಂದಿದ್ದಾರೆಯೇ ಎಂಬುವುದರ ಕುರಿತು ಆರೋಪಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿಗಳೆಲ್ಲರೂ ಬಿಹಾರ ಮೂಲದವರೆಂದು ಸಿಗ್ರ ಪೊಲೀಸ್ ಠಾಣಾಧಿಕಾರಿಯಾದ ಅನುಪ್ ಶುಕ್ಲಾ ತಿಳಿಸಿದ್ದಾರೆ.