ವಾಮಂಜೂರು ಅಣಬೆ ಫ್ಯಾಕ್ಟರಿ ಮಾಲಿನ್ಯ: SDPI ಮನವಿ ಬೆನ್ನಲ್ಲೇ ಪಾಲಿಕೆಯಿಂದ ಪರಿಶೀಲನೆ

Prasthutha|

ಮಂಗಳೂರು: ವಾಮಂಜೂರು ಬಳಿಯ ಅಣಬೆ ಫ್ಯಾಕ್ಟರಿಯಿಂದ ಉಂಟಾಗುತ್ತಿರುವ ಮಾಲಿನ್ಯದ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ SDPI ಮನವಿ ಮಾಡಿದ ಬೆನ್ನಲ್ಲೇ ಮೇಯರ್ ನೇತೃತ್ವದ ಮಂಗಳೂರು ಮಹಾನಗರ ಪಾಲಿಕೆಯವರು ಅಣಬೆ ಫ್ಯಾಕ್ಟರಿ ಇರುವ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪಾಲಿಕೆಯ. ನಿಯೋಗದಲ್ಲಿ ಮೇಯರ್ ಜೊತೆ ಪಾಲಿಕೆಯ ಕಮಿಷನರ್, ಪಾಲಿಕೆಯ ಆರೋಗ್ಯಾಧಿಕಾರಿ, ಪಾಲಿಕೆಯ ಪರಿಸರ ಅಧಿಕಾರಿ ಮತ್ತು ಎನ್‌ಐಟಿಕೆಯ ತಜ್ಞರೊಬ್ಬರಿದ್ದರು.

- Advertisement -

ಮೊದಲಿಗೆ ಅಣಬೆ ಫ್ಯಾಕ್ಟರಿಯಿಂದ ಹೊರ ಸೂಸುವ ಮಾಲಿನ್ಯದಿಂದ ನೇರಾ ಸಮಸ್ಯೆಗಳನ್ನು ಎದುರಿಸುತ್ತಿರುವ ಆಶ್ರಯ ಕಾಲನಿಗೆ ಭೇಟಿ ನೀಡಿದ ನಿಯೋಗಕ್ಕೆ ನೂರಾರು ಜನ ಸ್ಥಳೀಯರು ಮುತ್ತಿಗೆ ಹಾಕಿ ತಾವು ಅನುಭವಿಸುತ್ತಿರುವ ನರಕ ಯಾತನೆಗಳನ್ನು , ತಿಳಿಸೀದರು. ಚಿಕ್ಕಮಕ್ಕಳಿಂದ ಹಿಡಿದು ವಯೋವೃದ್ದರು ಅನುಭವಿಸುತ್ತಿರುವ ಸಮಸ್ಯೆಗಳ ಸರಮಾಲೆಯನ್ನೇ ಬಿಚ್ಚಿಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ದುರ್ನಾತದಿಂದ ಇಲ್ಲಿ ವಾಸಿಸಲು ಸಾಧ್ಯವಿಲ್ಲ. ಪರಿಸರದ ಹಲವು ಮಂದಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದಾರೆ. ತಕ್ಷಣ ಈ ಘಟಕವನ್ನು ಮುಚ್ಚಿಸಿ, ಇಲ್ಲದಿದ್ದರೆ ನಾವೇ ಮುಚ್ಚಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಸಿದರು.
ಈ ವೇಳೆ ಮನಪಾ ಆಯುಕ್ತರು ಸಮಜಾಯಿಷಿ ನೀಡಲು ಮುಂದಾದಾಗ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು ‘ನೀವು ಯಾರ ಪರವಾಗಿ ಬಂದಿದ್ದೀರಿ? ನಾವು ಮನವಿ ಸಲ್ಲಿಸಲು ಬಂದಾಗ ಮಾತನಾಡುವ ಸೌಜನ್ಯವನ್ನೂ ತೋರಲಿಲ್ಲ ಎಂದು ತರಾಟೆಗೆ ತಗೊಂಡರು.
ಮೊನ್ನೆ SDPI ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಈ ಅಣಬೆ ಕಾರ್ಖಾನೆ ವಿರುದ್ಧ ಜಿಲ್ಲಾಡಳಿತ ಮತ್ತು ಮಂಗಳೂರು ಮಹಾನಗರ ಪಾಲಿಕೆಗೆ ದೂರ ಸಲ್ಲಿಸಿತ್ತು. ಜನವಸತಿ ಪ್ರದೇಶದಲ್ಲಿರುವ ಅಣಬೆ ಕಾರ್ಖಾನೆಯನ್ನು ಸ್ಥಳಾಂತರಿಸಬೇಕು ಅಥವಾ ಪರವಾನಗಿ ರದ್ದು ಮಾಡಿ ಕಾರ್ಖಾನೆ ಮುಚ್ಚಬೇಕು ಎಂದು ಮನವಿ ಮಾಡಿದ್ದರು. ಇದರಿಂದ ಅನಾಹುತ ಉಂಟಾದರೆ ಜಿಲ್ಲಾಡಳಿತ ನೇರ ಹೊಣೆ ಎಂದು‌ SDPI ಎಚ್ಚರಿಸಿತ್ತು.

Join Whatsapp