ಮಾಜಿ ಸಚಿವ ಬಿ. ನಾಗೇಂದ್ರ ಪ್ರಕರಣದ ಮಾಸ್ಟರ್ ಮೈಂಡ್ ಎಂದ ED
ಬೆಂಗಳೂರು: ವಾಲ್ಮೀಕಿ ಹಗರಣದ ಸಂಬಂಧವಾಗಿ ಕೇಸ್‌ನಲ್ಲಿ ED 4,907 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದೆ.
187 ಕೋಟಿ ರೂಪಾಯಿ ಅಕ್ರವಾಗಿದ್ದು, ಇಡೀ ಪ್ರಕರಣದ ಮಾಸ್ಟರ್ ಮೈಂಡ್ ಮಾಜಿ ಸಚಿವ ಬಿ. ನಾಗೇಂದ್ರ. ಅವರ ಸೂಚನೆಯಂತೆ ಅಕ್ರಮವಾಗಿ ಸರ್ಕಾರದ ಖಜಾನೆ ಲೂಟಿ ಮಾಡಲಾಗಿದೆ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ಬಿ.ನಾಗೇಂದ್ರ, ಸತ್ಯನಾರಾಯಣ ವರ್ಮಾ, ಸತ್ಯನಾರಾಯಣ ಇಟಕಾರಿ, ನಿಗಮದ ಎಂಡಿ ಪದ್ಮನಾಭ ಸೇರಿ 25 ಆರೋಪಿ ವಿರುದ್ಧ ದೋಷಾರೋಪ ಮಾಡಲಾಗಿದೆ. ನಿಗಮದ ಕಚೇರಿ ಹೊರಗೆ ಹಲವು ಬಾರಿ ನಾಗೇಂದ್ರ ಮೀಟಿಂಗ್ ಮಾಡಿದ್ದಾರೆ. ಅಧಿಕಾರಿಗಳ ಮೇಲೆ ಒತ್ತಡ ಹೇರಿ ನಾಗೇಂದ್ರ ಉಪಖಾತೆ ತೆರೆಸಿದ್ದ ಎಂದು ತಿಳಿಸಿದ್ದಾರೆ.