ಅಯೋಧ್ಯೆ ರಾಮಮಂದಿರ ಬಳಿ ವಾಲ್ಮೀಕಿ ಮಂದಿರ ನಿರ್ಮಾಣವಾಗಬೇಕು: ಸತೀಶ್ ಜಾರಕಿಹೊಳಿ

Prasthutha|

ಹಾವೇರಿ: ಅಯೋಧ್ಯೆ ರಾಮಮಂದಿರ ಬಳಿ ಮಹರ್ಷಿ ವಾಲ್ಮೀಕಿ ಮಂದಿರ ನಿರ್ಮಾಣವಾಗಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

- Advertisement -

ಮಹರ್ಷಿ ವಾಲ್ಮೀಕಿ ರಾಮಾಯಣ ಗ್ರಂಥ ರಚಿಸಿದ್ದಾರೆ. ಅಯೋಧ್ಯೆ ಏರ್ ಪೋರ್ಟ್ ಗೆ ಮಹರ್ಷಿ ವಾಲ್ಮೀಕಿ ಹೆಸರಿಟ್ಟಿದ್ದನ್ನು ಸ್ವಾಗತಿಸುವೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಖುಷಿ ತಂದಿದೆ. ಇದು ಭಾರತೀಯರ ಬಹುದಿನದ ಕನಸಾಗಿತ್ತು ಎಂದು ಹೇಳಿದರು.

ಇನ್ನು ಬಿಜೆಪಿ ರಾಜಕೀಯವಾಗಿ ಲಾಭ ಪಡೆಯುತ್ತಿರುವ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ಎಲ್ಲಿ ಇಲ್ಲಾ ಹೇಳಿ? ಎಲ್ಲ ಕಡೆ ಇದೆ. ಅದು ಲಾಭ ಆಗುತ್ತೋ ನಷ್ಟವಾಗುತ್ತೋ ಚುನಾವಣೆ ನಂತರ ತಿಳಿಯುತ್ತೆ ಎಂದರು.

Join Whatsapp