ವಡೋದರಾ | ಆಟೋರಿಕ್ಷಾ – ಟ್ರಕ್ ಮುಖಾಮುಖಿ ಡಿಕ್ಕಿ: 7 ಸಾವು, 7 ಮಂದಿಗೆ ಗಾಯ

Prasthutha|

ವಡೋದರಾ: ಆಟೋರಿಕ್ಷಾ ಮತ್ತು ಟ್ರೈಲರ್ ಟ್ರಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದು, ಇತರ ಏಳು ಜನರು ಗಾಯಗೊಂಡಿರುವ ಘಟನೆ ವಡೋದರಾದ ದರ್ಜಿಪುರ ವಾಯುನೆಲೆಯ ಬಳಿ ನಡೆದಿದೆ.

- Advertisement -

ಇಂದು ಮಧ್ಯಾಹ್ನ ವಡೋದರಾದ ದರ್ದಿಪುರ ವಾಯುನೆಲೆಯ ಬಳಿ ಟ್ರೈಲರ್ ಟ್ರಕ್ ಮತ್ತು ಆಟೋರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ಸಂಭವಿಸಿದೆ.

ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಮತ್ತು ಗಾಯಾಳುಗಳಿಗೆ ನೆರವು ಘೋಷಿಸಿದ್ದಾರೆ.

Join Whatsapp