12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ವಿತರಣೆ; ಎರಡು ಡೋಸ್ ಗಳ ಮಧ್ಯೆ 28 ದಿನಗಳ ಕಾಲಾವಕಾಶ

Prasthutha|

ಹೊಸದಿಲ್ಲಿ: 12ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಮಾ.16 ರಿಂದ ಕೊರ್ಬೆವ್ಯಾಕ್ಸ್‌ ಲಸಿಕೆ ವಿತರಣೆ ಆರಂಭವಾಗಲಿದೆ. ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಮಂಗಳವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು,ಮೊದಲ ಮತ್ತು ಎರಡನೇ ಡೋಸ್‌ ನಡುವೆ 28 ದಿನಗಳ ಅಂತರ ಇರಬೇಕು ಎಂದು ಸೂಚಿಸಲಾಗಿದೆ.

- Advertisement -

2010ನೇ ಇಸವಿಯಲ್ಲಿ ಜನಿಸಿದವರು ಮತ್ತು ಈಗಾಗಲೇ 12 ವರ್ಷ ಪೂರ್ತಿಗೊಂಡವರು ಕೋವಿನ್‌ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಅರ್ಹರಾಗಿದ್ದು,ಕೋವಿನ್‌ ವೆಬ್‌ಸೈಟ್‌ನಲ್ಲಿ ಕುಟುಂಬ ಸದಸ್ಯರು ಹೊಂದಿರುವ ಖಾತೆಯ ಮೂಲಕವೂ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ, ಇತರ ಆರೋಗ್ಯ ಸಮಸ್ಯೆ (ಕೊ-ಮಾರ್ಬಿಡಿಟಿ) ಇಲ್ಲದೇ ಇರುವ 60 ವರ್ಷ ಮೇಲ್ಪಟ್ಟವರಿಗೆ ಕೂಡ ಲಸಿಕೆ ಹಾಕಿಸಿಕೊಳ್ಳಲು ಕೇಂದ್ರ ಸರ್ಕಾರ ಅವಕಾಶ ಕಲ್ಪಿಸಿದೆ. ಮಕ್ಕಳಿಗೆ ಲಸಿಕೆ ನೀಡುವ ತಂಡಗಳಿಗೆ ಸೂಕ್ತ ತರಬೇತಿ ನೀಡುವಂತೆಯೂ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚಿಸಿದೆ.



Join Whatsapp