ಬಿಜೆಪಿಯೊಳಗೆ ಭಿನ್ನಮತ ಸ್ಪೋಟ : ಮುಖ್ಯಮಂತ್ರಿ ರಾಜೀನಾಮೆ !

Prasthutha|

ಉತ್ತರಖಂಡ ಬಿಜೆಪಿಯೊಳಗೆ ಭಿನ್ನಮತ ಭುಗಿಲೆದ್ದಿದ್ದು, ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯ ಕುರಿತು ನಿನ್ನೆಯಿಂದಲೇ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ರಾಜ್ಯಪಾಲೆ ಬೇಬಿ ರಾಣಿ ಮೌರ್ಯರನ್ನು ಭೇಟಿ ಮಾಡಿದ್ದ ರಾವತ್ ತನ್ನ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

- Advertisement -

ರಾಜ್ಯ ಬಿಜೆಪಿಯೊಳಗಿನ ಕೆಲ ಶಾಸಕರು ರಾವತ್ ವಿರುದ್ಧ ಸಿಡಿದೆದ್ದು ಹೈಕಮಾಂಡಿಗೆ ದೂರು ನೀಡಿದ್ದರು. ಅದರಂತೆ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಸಮಿತಿಯೊಂದನ್ನು ರಚಿಸಿ ಭಿನ್ನಮತೀಯ ಶಾಸಕರ ಅಭಿಪ್ರಾಯ ತೆಗೆದುಕೊಂಡಿದ್ದರು. ಆ ಬಳಿಕ ರಾವತ್ ಅವರನ್ನು ದೆಹಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ರಾವತ್ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಊಹಾಪೋಹಗಳೆದ್ದಿದ್ದವು. ಅದೀಗ ನಿಜವಾಗಿದೆ.

ತೆರವಾಗಿರುವ ಸ್ಥಾನಕ್ಕೆ ಕ್ಯಾಬಿನೆಟ್ ಮಂತ್ರಿ  ಧನ್ ಸಿಂಗ್ ರಾವತ್ ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಲಿದ್ದಾರೆ ಎನ್ನಲಾಗಿದೆ. ಅವರು ಹೆಲಿಕಾಪ್ಟರ್ ಮೂಲಕ ರಾಜ್ಯ ರಾಜಧಾನಿ ಡೆಹ್ರಾಡೂನಿಗೆ ಆಗಮಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಗೆ ಕೇವಲ ಒಂದು ವರ್ಷವಿರುವಾಗ ನಡೆದಿರುವ ಈ ಬೆಳವಣಿಗೆಯಿಂದಾಗಿ ರಾಜ್ಯ ಬಿಜೆಪಿ ಕಂಗೆಟ್ಟಿದೆ ಎನ್ನಲಾಗಿದ್ದು, ಮುಖ್ಯಮಂತ್ರಿ ಬದಲಾವಣೆಯಿಂದಾಗಿ ಪಕ್ಷದೊಳಗಿನ ಭಿನ್ನಮತಕ್ಕೆ ತೇಪೆ ಹಚ್ಚುವ ಕಾರ್ಯಕ್ಕೆ ಕೈಹಾಕಿದೆ.

Join Whatsapp