ಲಕ್ನೋ: ಯೋಗಿ ಆದಿತ್ಯನಾಥ್ ಅವರ ಆಡಳಿತಾವಧಿಯಲ್ಲಿ ಪೊಲೀಸ್ ಎನ್ಕೌಂಟರ್ಗಳು ಉತ್ತರ ಪ್ರದೇಶವನ್ನು ‘ಎನ್ಕೌಂಟರ್ ಪ್ರದೇಶ’ವಾಗಿ ಮಾರ್ಪಡಿಸಿದೆ.
ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ 2017 ರಿಂದ ಉತ್ತರಪ್ರದೇಶ ಪೊಲೀಸರು 10,900 ಕ್ಕೂ ಹೆಚ್ಚು ಎನ್ಕೌಂಟರ್ಗಳನ್ನು ನಡೆಸಿದ್ದಾರೆ.
ಇದರಲ್ಲಿ ಅಧಿಕ ಎನ್ಕೌಂಟರ್ಗಳು ನಕಲಿ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆರೋಪಿಸುತ್ತಿದೆ.
183 ಜನರು ಪೊಲೀಸ್ ಕಸ್ಟಡಿಯಲ್ಲಿ ಜೀವ ಕಳೆದುಕೊಂಡಿದ್ದಾರೆ. ನ್ಯಾಯಾಂಗ ವ್ಯವಸ್ಥೆಯನ್ನೇ ಅಣಕಿಸುವಂತೆ ಪೋಲೀಸರೇ ನ್ಯಾಯಾಧೀಶರಂತೆ ತೀರ್ಪು ನೀಡುವ ಪರಿಸ್ಥಿತಿ ಕಾನೂನು ಸುವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂಬ ಟೀಕೆಯೂ ಹಲವೆಡೆ ವ್ಯಕ್ತವಾಗುತ್ತಿದೆ.
ಗ್ಯಾಂಗ್ ಲೀಡರ್ಗಳು ಮತ್ತು ಕ್ರಿಮಿನಲ್ಗಳನ್ನು ನಿರ್ನಾಮ ಮಾಡುವ ಉದ್ದೇಶ ಎಂದು ಹತ್ಯೆಗಳನ್ನು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೆ, ಸಮಾಜವಾದಿ ಪಕ್ಷ ಅದರ ಹಿಂದಿರುವ ನೈಜ ಬಣ್ಣವನ್ನು ಬಯಲಿಗೆಳೆಯುವ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿರುವ ಕ್ರಿಮಿನಲ್ ಗ್ಯಾಂಗ್ ನಾಯಕರು ಆದಿತ್ಯನಾಥ್ ಅವರ ಜಾತಿಗೆ ಸೇರಿದವರಾಗಿದ್ದಾರೆ. ಕೊಲೆ ಮತ್ತು ಅತ್ಯಾಚಾರದಲ್ಲಿ ತೊಡಗಿಕೊಳ್ಳುವ ಇವರೆಲ್ಲಾ ಯಾಕೆ ಎನ್ಕೌಂಟರ್ಗಳಿಗೆ ಬಲಿಯಾಗುತ್ತಿಲ್ಲ? ಎಂದು ಸಮಾಜವಾದಿ ಪಕ್ಷವು ಪ್ರಶ್ನಿಸಿದೆ.
ದರೋಡೆಗಳು ಮತ್ತು ಅಪಹರಣಗಳು ಉತ್ತರಪ್ರದೇಶದಾದ್ಯಂತ ಅವ್ಯಾಹತವಾಗಿ ನಡೆಯುತ್ತಿವೆ. ಬಿಜೆಪಿಯನ್ನು ಬೆಂಬಲಿಸುವ ಎಲ್ಲಾ ಕ್ರಿಮಿನಲ್ಗಳು ಇನ್ನೂ ಸಕ್ರಿಯರಾಗಿದ್ದಾರೆ. ಹಲವು ಪ್ರಕರಣಗಳಿರುವ ರಾಜಕಾರಣಿಗಳೂ ಪಟ್ಟಿಯಲ್ಲಿದ್ದಾರೆ.
ಉನ್ನಾವೋ ಅತ್ಯಾಚಾರ ಪ್ರಕರಣದ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್ (28 ಪ್ರಕರಣಗಳು), ವಾರಣಾಸಿಯ ಬ್ರಿಜೇಶ್ ಸಿಂಗ್ (106 ಪ್ರಕರಣಗಳು), ಜಾನ್ಪುರದ ಧನಂಜಯ್ ಸಿಂಗ್ (46 ಪ್ರಕರಣಗಳು) ಮತ್ತು ಪ್ರತಾಪ್ಗಢದ ರಘುರಾಜ್ ಪ್ರತಾಪ್ ಸಿಂಗ್ ಅಲಿಯಾಸ್ ರಾಜಾ ಭಯ್ಯಾ (31 ಪ್ರಕರಣಗಳು) ಪಟ್ಟಿಯಲ್ಲಿದ್ದಾರೆ.
ಉತ್ತರಪ್ರದೇಶದಲ್ಲಿ ಪೊಲೀಸ್ ಎನ್ಕೌಂಟರ್ಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಎಲ್ಲಾ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗುತ್ತಿದ್ದು, ಎನ್ಎಚ್ಆರ್ಸಿ ಮಾರ್ಗಸೂಚಿಯಂತೆ ಮ್ಯಾಜಿಸ್ಟ್ರೇಟ್ ತನಿಖೆ ನಡೆಸಬೇಕು ಎಂಬ ಬೇಡಿಕೆಯೂ ಇದೆ.