ಉತ್ತರ ಪ್ರದೇಶದ ಭಯಾನಕತೆ | ಕತ್ತರಿಸಿದ ಮಗಳ ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ತಂದೆ

Prasthutha: March 4, 2021

ಲಖನೌ: ತಂದೆಯೊಬ್ಬ ತನ್ನ ಮಗಳ ರುಂಡ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ನಡೆದಿದೆ. 17 ವರ್ಷದ ಮಗಳು ಪ್ರೇಮಿಯ ಜತೆ ಇದ್ದುದನ್ನು ಕಂಡ ಸರ್ವೇಶ್ ಕುಮಾರ್ ಎಂಬಾತ ಈ ಕೃತ್ಯ ಎಸಗಿದ್ದಾನೆ. ಮಗಳ ರುಂಡವನ್ನು ಛೇದಿಸಿ ಅದರ ಸಹಿತವಾಗಿ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಎನ್ ಡಿ ಟಿವಿ ವರದಿ ಮಾಡಿದೆ.

ತರಕಾರಿ ಮಾರಾಟ ಮಾಡುವ ಸರ್ವೇಶ್ ಕುಮಾರ್ ಮಗಳು ಯುವಕನೊಂದಿಗೆ ಸಂಬಂಧ ಹೊಂದಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದ. ನಿನ್ನೆ ಸುಮಾರು ಮೂರು ಗಂಟೆಯ ಹೊತ್ತಿಗೆ ಮಗಳು ಪ್ರಿಯತಮನ ಜತೆಗೆ ಇರುವುದನ್ನು ಕಂಡು ಸಿಟ್ಟುಗೊಂಡಿದ್ದಾನೆ. ಇದರಿಂದ ಆಕ್ರೋಶಗೊಂಡ ಆತ ಹರಿತವಾದ ಚಾಕು ತಂದು ಮಗಳ ತಲೆ ಕತ್ತರಿಸಿದ್ದಾನೆ! ಕತ್ತರಿಸಿದ ಮಗಳ ತಲೆಯೊಂದಿಗೆ ಎರಡು ಕಿಲೋಮೀಟರ್ ದೂರದ ಪೊಲೀಸ್ ಠಾಣೆಗೆ ನಡೆದುಕೊಂಡು ಹೋಗಿ ಪೊಲೀಸರಿಗೆ ಶರಣಾಗಿದ್ದಾನೆ. ಈತ ಹೀಗೆ ಹೋಗುತ್ತಿರುವುದನ್ನು ನೋಡಿದ ಜನ ಬೆಚ್ಚಿಬಿದ್ದಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಮಗಳಿಗೆ ಈ ರೀತಿಯ ಸಂಬಂಧ ಇರುವುದನ್ನು ತಿಳಿದು ಸಿಟ್ಟಿನಿಂದ ಇಂಥದ್ದೊಂದು ಘನಘೋರ ಕೃತ್ಯ ಎಸಗಿರುವುದಾಗಿ ಪೊಲೀಸರು ಹೇಳಿದ್ದಾರೆ.

“ನಾನೇ ಕೊಂದಿದ್ದೇನೆ. ಬೇರೆ ಯಾರೂ ಇರಲಿಲ್ಲ. ಮನೆಯಲ್ಲಿ ಬಾಗಿಲು ಹಾಕಿ ಚೂಪಾದ ಚಾಕುವಿನಿಂದ ತಲೆ ಕತ್ತರಿಸಿದ್ದೇನೆ. ನನ್ನ ಮಗಳ ದೇಹ ಮನೆಯಲ್ಲಿದೆ” ಎಂದು ಸಾವಾಧಾನವಾಗಿ ಹೇಳಿದ್ದಾನೆ. ನಂತರ ಆತನನ್ನು ಪೊಲೀಸರು ಬಂಧಿಸಿದ್ದಾರೆ.

 “ಸರ್ವೇಶ್ ಎಂಬ ವ್ಯಕ್ತಿಯು ತನ್ನ ಮಗಳ ತಲೆಕಡಿದು ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಅಲ್ಲದೇ ಮೃತಳ ತಲೆಯನ್ನು ಸಮರ್ಪಕವಾಗಿ ಸಾಗಿಸದ ಕಾರಣಕ್ಕೆ ಪೊಲೀಸ್ ಪೇದಯೊಬ್ಬನನ್ನು ಸಹ ಅಮಾನತ್ತು ಮಾಡಿದ್ದೇವೆ” ಎಂದು ಪೊಲೀಸ್ ಅಧಿಕಾರಿ ಕಪಿಲ್ ದಿಯೊ ತಿಳಿಸಿದ್ದಾರೆ.

ರಾಷ್ಟ್ರೀಯ ಅಪರಾಧ ವರದಿ ಬ್ಯೂರೋ ಪ್ರಕಾರ 2019ರಲ್ಲಿ ಮಹಿಳೆಯರ ಮೇಲಿನ ಅಪರಾಧಗಳಲ್ಲಿ ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಮಕ್ಕಳ ಮೇಲಿನ ಪೋಕ್ಸೋ ಪ್ರಕರಣಗಳಲ್ಲಿಯೂ ಸಹ ಉತ್ತರ ಪ್ರದೇಶವೇ (7,444) ಮುಂದಿದೆ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ದಿನೇ ದಿನೇ ಹದಗೆಡುತ್ತಿದೆ. ಹಲ್ಲೆ, ಕೊಲೆ, ಅತ್ಯಾಚಾರದಂತಹ ಘಟನೆಗಳು ಪ್ರತಿದಿನ ಸಾಮಾನ್ಯವಾಗಿವೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!