ಉತ್ತರಾಖಂಡ ಸುರಂಗ ಕುಸಿತ: 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮತ್ತೆ ಸ್ಥಗಿತ

Prasthutha|

ಡೆಹ್ರಾಡೂನ್: ಉತ್ತರಕಾಶಿಯ ಸಿಲ್ಕ್ಯಾನ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆ ಕಾರ್ಯಾಚರಣೆಗೆ ಒಂದಿಲ್ಲೊಂದು ಅಡಚಣೆ ಎದುರಾಗುತ್ತಿದ್ದು, ರಕ್ಷಣೆ ವಿಳಂಬವಾಗುತ್ತಿದೆ. ಕಾರ್ಮಿಕರನ್ನು ತಲುಪಲು ಕೆಲವೇ ಮೀಟರ್ ಬಾಕಿ ಇದೆ. ಇದರ ನಡುವೆ ಮತ್ತೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.

- Advertisement -


ಇದಕ್ಕೂ ಮೊದಲು ಗುರುವಾರ ಡ್ರಿಲ್ಲಿಂಗ್ ಯಂತ್ರವನ್ನಿರಿಸಲಾಗಿದ್ದ ಕಟ್ಟೆಯಲ್ಲಿ ಬಿರುಕು ಕಂಡ ಮೇಲೆ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು. ಆದರೆ ಇದನ್ನು ಸರಿಪಡಿಸಿ ಮತ್ತೆ ಕಾರ್ಯಾಚರಣೆ ಮುಂದುವರಿಸಿದಾಗ ಡ್ರಿಲ್ಲಿಂಗ್ ಯಂತ್ರಕ್ಕೆ ಲೋಹದ ವಸ್ತುವಿನಿಂದ ಮತ್ತೆ ಅಡ್ಡಿಯುಂಟಾಯಿತು. ಡ್ರಿಲ್ಲಿಂಗ್ ಮತ್ತೆ ಶೀಘ್ರ ಪುನರಾರಂಭಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದರೂ ಶುಕ್ರವಾರ ತಡ ಸಂಜೆವರೆಗೆ ಡ್ರಿಲ್ಲಿಂಗ್ ಆರಂಭಗೊಂಡಿಲ್ಲ. ನೆಲದಡಿ ಹೋಗಿ ಪರಿಶೀಲಿಸುವ ರಾಡಾರ್, ಮುಂದಿನ ಐದು ಮೀಟರ್ ತನಕ ಯಾವುದೇ ಲೋಹದ ವಸ್ತುಗಳ ಅಡ್ಡಿಯಿಲ್ಲ ಎಂದು ತಿಳಿಸಿದೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Join Whatsapp