ಉತ್ತರಾಖಂಡ: ಮದರಸಾ ಧ್ವಂಸ, ಹಿಂಸಾಚಾರದಲ್ಲಿ 50 ಮಂದಿ ಆಸ್ಪತ್ರೆಗೆ

Prasthutha|

ಉತ್ತರಾಖಂಡ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ಅಧಿಕಾರಿಗಳು ಕಾನೂನುಬಾಹಿರ ಎಂದು ಘೋಷಿಸಿದ ಮದರಸಾವನ್ನು ನೆಲಸಮಗೊಳಿಸಲು ಹೋದಾಗ ಘರ್ಷಣೆಯುಂಟಾಗಿದೆ. 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರದೇಶದಲ್ಲಿ ಶೂಟ್-ಎಟ್-ಸೈಟ್ ಆದೇಶಗಳನ್ನ ಹೊರಡಿಸಲಾಗಿದೆ ಮತ್ತು ಭದ್ರತೆಯನ್ನ ಬಲಪಡಿಸಲಾಗಿದೆ.
ಎಂದು ವರದಿಯಾಗಿದೆ.

- Advertisement -

ಪೊಲೀಸರು ಮತ್ತು ಅಧಿಕಾರಿಗಳ ತಂಡವು ಪಕ್ಕದ ಪ್ರಾರ್ಥನಾ ಪ್ರದೇಶವನ್ನು ಹೊಂದಿರುವ ಮದರಸಾ ಧ್ವಂಸಕ್ಕೆ ಹೋಗಿತ್ತು. ಜೆಸಿಬಿ ಯಂತ್ರವು ಚಲಿಸಲು ಪ್ರಾರಂಭಿಸಿದಾಗ ಘರ್ಷಣೆ ನಡೆದಿದೆ ಎನ್ನಲಾಗಿದೆ.

ಪೊಲೀಸರು, ಅಧಿಕಾರಿಗಳು ನಾಗರಿಕರು ಮತ್ತು ಪತ್ರಕರ್ತರು ಗಾಯಗೊಂಡಿದ್ದಾರೆ ಎಂದು ವರದಿಯಾಗಿವೆ‌



Join Whatsapp