ಐದು ಪತಂಜಲಿ ಔಷಧಗಳಿಗೆ ನಿಷೇಧ ಹೇರಿದ ಉತ್ತರಾಖಂಡ ಸರ್ಕಾರ

Prasthutha|

ಡೆಹ್ರಾಡೂನ್: ಉತ್ತರಾಖಂಡ ಆಯುರ್ವೇದ ಮತ್ತು ಯುನಾನಿ ಪರವಾನಿಗೆ ಪ್ರಾಧಿಕಾರವು ರಾಮ್’ದೇವ್ ಅವರ ಪತಂಜಲಿ ಆಯುರ್ವೇದ್’ನ ಐದು ಉತ್ಪನ್ನಗಳ ಉತ್ಪಾದನೆಯನ್ನು ನಿಲ್ಲಿಸುವಂತೆ ಸೂಚಿಸಿದೆ.
ಜಾಹೀರಾತುಗಳ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಪ್ರಾಧಿಕಾರ ಮುಂದಾಗಿದೆ.

- Advertisement -

ನಿಷೇಧ ಹೇರಲಾದ ಪತಂಜಲಿ ಉತ್ಪನ್ನಗಳೆಂದರೆ ಮಧುಗ್ರಿಟ್, ಐಗ್ರಿಟ್, ಥೈರೋಗ್ರಿಟ್, ಬಿಪಿಗ್ರಿಟ್ ಮತ್ತು ಲಿಪಿಡೋಮ್ ಗಳಾಗಿವೆ.

ಐದು ಉತ್ಪನ್ನಗಳನ್ನು ಪತಂಜಲಿ ಕಂಪೆನಿ ಅಧಿಕ ರಕ್ತದೊತ್ತಡ, ಮಧುಮೇಹ, ಗಾಯಿಟರ್, ಗ್ಲುಕೋಮಾ ಮತ್ತು ಅಧಿಕ ಕೊಲೆಸ್ಟ್ರಾಲ್’ಗೆ ಉತ್ತರ ಔಷಧಿ ಎಂಬುದಾಗಿ ಪ್ರಚಾರ ಪಡಿಸಿತ್ತು ಎಂದು ಮಾಧ್ಯಮಗಳು ವರದಿ ಮಾಡಿವೆ.

- Advertisement -

ಕೇರಳ ಮೂಲದ ನೇತ್ರ ತಜ್ಞ ಕೆ.ವಿ.ಬಾಬು ಅವರ ದೂರಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ.

ಜಾಹೀರಾತುಗಳು ಡ್ರಗ್ಸ್ ಆ್ಯಂಡ್ ಕಾಸ್ಮೆಟಿಕ್ಸ್ ಆಕ್ಟ್ ಮತ್ತು ಮ್ಯಾಜಿಕ್ ರೆಮಿಡೀನ್ ಆಕ್ಟ್ ಅನ್ನು ಉಲ್ಲಂಘಿಸಿವೆ ಎಂದು ಬಾಬು ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ರಕ್ತದೊತ್ತಡ, ಗ್ಲುಕೋಮಾ, ಗಾಯಿಟರ್ ಮತ್ತು ಮಧುಮೇಹ ಸೇರಿದಂತೆ ಕೆಲವು ರೋಗಗಳಿಗೆ ಬೇಕಾದ ಚಿಕಿತ್ಸೆಯನ್ನು ಉತ್ತೇಜಿಸುವ ಜಾಹೀರಾತುಗಳನ್ನು ಕಾನೂನು ನಿಷೇಧಿಸುತ್ತದೆ.

Join Whatsapp