ಬಿಜೆಪಿ ಅಧಿಕಾರ ಹಿಡಿದರೆ ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಉತ್ತರಾಖಂಡ ಸಿಎಂ ಭರವಸೆ

Prasthutha|

ಡೆಹ್ರಾಡೂನ್: ಉತ್ತರಾಖಂಡದಲ್ಲಿ ಚುನಾವಣಾ ಕಣ ರಂಗೇರುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಕೂಡಲೇ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಿದೆ. ಇದರಿಂದ ಪ್ರತಿ ನಾಗರಿಕನಿಗೂ ಸಮಾನ ಹಕ್ಕುಗಳು ದೊರೆಯಲಿದೆ ಎಂದು ಉತ್ತರಾಖಂಡಾ ಮುಖ್ಯಮಂತ್ರಿ ಪುಷ್ಕರ್ ಎಸ್. ಧಾಮಿ ತಿಳಿಸಿದ್ದಾರೆ.

- Advertisement -

ನೂತನ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣದಿಂದಲೇ ರಾಜ್ಯದಲ್ಲಿ ಸಮಾನ ನಾಗರಿಕ ಸಂಹಿತೆ (ಯುಸಿಸಿ) ಕರಡು ಪ್ರತಿ ಸಿದ್ಧಪಡಿಸಲು ಸಮಿತಿಯನ್ನು ರಚಿಸಲಿದೆ ಎಂದು ಅವರು ಸುದ್ದಿ ಸಂಸ್ಥೆಗೆ ತಿಳಿಸಿದರು. ನೂತನ ಕಾಯ್ದೆಯ ಅನ್ವಯ ಮದುವೆ, ವಿಚ್ಛೇದನ, ಭೂಮಿ-ಆಸ್ತಿ ಮತ್ತು ಪ್ರತಿ ನಾಗರಿಕರ ನಂಬಿಕೆಯನ್ನು ಗಣನೆಗೆ ತೆಗೆಯದೆ ಪ್ರತಿಯೊಬ್ಬರಿಗೂ ಒಂದೇ ರೀತಿಯ ಕಾನೂನು ರಚನೆಯಾಗಲಿದೆ ಎಂದು ಅವರು ತಿಳಿಸಿದರು.

“ಇದು ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುತ್ತದೆ, ಲಿಂಗ ನ್ಯಾಯವನ್ನು ಹೆಚ್ಚಿಸುತ್ತದೆ, ಮಹಿಳಾ ಸಬಲೀಕರಣವನ್ನು ಬಲಪಡಿಸುತ್ತದೆ ಮತ್ತು ರಾಜ್ಯದ ಅಸಾಮಾನ್ಯ ಸಾಂಸ್ಕೃತಿಕ-ಆಧ್ಯಾತ್ಮಿಕ ಗುರುತು ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ.”ಎಂದು ಅವರು ಟ್ವಿಟರ್ ನಲ್ಲಿ ಹೇಳಿದ್ದಾರೆ.

- Advertisement -

ಧರ್ಮದ ಸ್ವಾತಂತ್ರ್ಯವನ್ನು ನಿರ್ಭಂದಿಸಿ ದೇಶದೆಲ್ಲೆಡೆ ಸಮಾನ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿದೆ.

ಉತ್ತರಾಖಂಡ, ಗೋವಾ, ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಎರಡನೇ ಹಂತವನ್ನು ಫೆಬ್ರವರಿ 14 ರಂದು ನಿಗದಿಪಡಿಸಲಾಗಿದೆ. ಉತ್ತರಾಖಂಡ ಮತ್ತು ಗೋವಾದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.



Join Whatsapp