ಬರೇಲಿ: ಪಾಕಿಸ್ತಾನಿ ಹಾಡುಗಳನ್ನು ಕೇಳಿದ್ದಕ್ಕಾಗಿ ಇಬ್ಬರು ಮುಸ್ಲಿಮ್ ಅಪ್ರಾಪ್ತ ಬಾಲಕರ ವಿರುದ್ಧ ಉತ್ತರ ಪ್ರದೇಶದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ.
ಸ್ಥಳೀಯರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿದ ಪೊಲೀಸರು ಸೋದರ ಸಂಬಂಧಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ ಎಂದು ಹೇಳಲಾಗಿದೆ.
ಬರೇಲಿ ಜಿಲ್ಲೆಯ ಸಿಂಘೈ ಮುರ್ವಾನ್ ನಲ್ಲಿ ಕಿರಾಣಿ ಅಂಗಡಿಯನ್ನು ನಡೆಸುತ್ತಿರುವ ಅಪ್ರಾಪ್ತರ ವಿರುದ್ಧ ಭೂತಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನೆರೆಯ ಪಾಕಿಸ್ತಾನವನ್ನು ಹೊಗಳುವ ಹಾಡುಗಳನ್ನು ಹಾಕಿದ ಕಾರಣ ಈ ಇಬ್ಬರನ್ನು ಬಂಧಿಸುವಂತೆ ದೂರು ನೀಡಲಾಗಿದ್ದು, ಪಾಕಿಸ್ತಾನದ ಪರ ಹಾಡುಗಳನ್ನು ಕೇಳುತ್ತಿರುವ ವೀಡಿಯೋವನ್ನು ಗುಟ್ಟಾಗಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡಲಾಗಿತ್ತು.
ಸದ್ಯ ಅಪ್ರಾಪ್ತರ ವಿರುದ್ಧ ಐಪಿಸಿ ಸೆಕ್ಷನ್ 153 ಬಿ, 504, 506 ಮತ್ತು UAPA ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಅಧಿಕಾರಿ ರೋಹಿತ್ ಸಿಂಗ್ ಸಜ್ವಾನ್ ತಿಳಿಸಿದ್ದಾರೆ.