ಉತ್ತರ ಪ್ರದೇಶ: ರೈಲ್ವೆ ನಿಲ್ದಾಣದ ಶೆಡ್ ಕುಸಿದು ಹಲವು ಮಂದಿಗೆ ಗಾಯ

Prasthutha|

ಸಂಭಾಲ್: ರೈಲು ನಿಲ್ದಾಣದಲ್ಲಿ ಟಿನ್ ಶೆಡ್ ಕುಸಿದು ಹಲವು ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲೆಯ ಚಂದೌಸಿ ರೈಲು ನಿಲ್ದಾಣದಲ್ಲಿ ಬುಧವಾರ ತಡರಾತ್ರಿ ನಡೆದಿದೆ.

- Advertisement -


ಟಿನ್ ಶೆಡ್ ಅಲುಗಾಡಲು ಪ್ರಾರಂಭಿಸಿದ ತಕ್ಷಣ ಅನೇಕ ಪ್ರಯಾಣಿಕರು ಓಡಿ ಹೊರಗೆ ಬಂದಿದ್ದಾರೆ, ಆದರೆ ಅಲ್ಲಿದ್ದ ತಂದೆ-ಮಗ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.


ಘಟನೆಯ ಬಗ್ಗೆ ಮಾಹಿತಿ ನೀಡಿದ ನಂತರ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್ಪಿ) ಘಟನಾ ಸ್ಥಳಕ್ಕೆ ಆಗಮಿಸಿದರು ಮತ್ತು ಪ್ರಯಾಣಿಕರ ಸಹಾಯದಿಂದ ಅವಶೇಷಗಳಿಂದ ಗಾಯಗೊಂಡವರನ್ನು ರಕ್ಷಿಸಿದರು. ನಂತರ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಕೆಲವರನ್ನು ಖಾಸಗಿ ಆಸ್ಪತ್ರೆಗೆ ಕೂಡ ರವಾನಿಸಲಾಗಿದೆ.

Join Whatsapp