ಬಾರಬಂಕಿ ಮಸೀದಿ ಧ್ವಂಸ ಕುರಿತು ವರದಿ| ‘ದಿ ವೈರ್’ ವಿರುದ್ಧ ಯುಪಿ ಯಲ್ಲಿ ಮತ್ತೊಂದು ಪ್ರಕರಣ

Prasthutha|

ಲಕ್ನೋ: ಬಾರಬಂಕಿಯ ಮಸೀದಿಯನ್ನು ಧ್ವಂಸಗೊಳಿಸಿದ ಕುರಿತು ಸಾಕ್ಷ್ಯಚಿತ್ರ ಬಿಡುಗಡೆ ಮಾಡಿದ ಪ್ರಮುಖ ರಾಷ್ಟ್ರೀಯ ಆನ್‌ಲೈನ್ ಸುದ್ದಿ ಪೋರ್ಟಲ್ ‘ದಿ ವೈರ್’ ವಿರುದ್ಧ ಉತ್ತರಪ್ರದೇಶ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

- Advertisement -

ಪರಸ್ಪರ ದ್ವೇಷವನ್ನು ಪ್ರಚೋದಿಸಿ ಧರ್ಮದ ಹೆಸರಿನಲ್ಲಿ ಗಲಭೆಗಳನ್ನು ಸೃಷ್ಠಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿ ಬಾರಬಂಕಿ ಪೊಲೀಸರು FIR ದಾಖಲಿಸಿದ್ದಾರೆ. ಗಾಝಿಯಾಬಾದ್‌ನಲ್ಲಿ ಮುಸ್ಲಿಮ್ ವೃದ್ಧರೊಬ್ಬರನ್ನು ಥಳಿಸಿದ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಉತ್ತರಪ್ರದೇಶ ಪೊಲೀಸರು ‘ದಿ ವೈರ್’ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ ಕೆಲವು ದಿನಗಳಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.

‘ದಿ ವೈರ್‌’ನ ಇಬ್ಬರು ಪತ್ರಕರ್ತರ ಹೆಸರನ್ನು ಸಹ FIR ಗೆ ಸೇರಿಸಲಾಗಿದೆ. “ನ್ಯೂಸ್ ಪೋರ್ಟಲ್ ಅನ್ನು ಬೆದರಿಸಲು ಸಾಧ್ಯವಿಲ್ಲ. ಉತ್ತರಪ್ರದೇಶ ಪೊಲೀಸರು ಈ ಹಿಂದೆ ವಿವಿಧ ಪ್ರಕರಣಗಳನ್ನು ದಾಖಲಿಸಿದಂತೆ ಈ ಪ್ರಕರಣವೂ ಕೂಡ ಆಧಾರರಹಿತವಾಗಿದೆ” ಎಂದು ‘ದಿ ವೈರ್‌’ನ ಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಹೇಳಿದ್ದಾರೆ.
ಕಳೆದ 14 ತಿಂಗಳುಗಳಲ್ಲಿ ‘ದಿ ವೈರ್’ ಮತ್ತು ಅದರ ಪತ್ರಕರ್ತರ ವಿರುದ್ಧ ಉತ್ತರಪ್ರದೇಶ ಪೊಲೀಸರು ದಾಖಲಿಸಿದ ನಾಲ್ಕನೇ FIR ಇದಾಗಿದೆ.

- Advertisement -

2021 ರ ಮೇ 17 ರಂದು ಕಾನೂನುಬಾಹಿರ ನಿರ್ಮಾಣದ ಆರೋಪದ ಮೇಲೆ ಜಿಲ್ಲಾಡಳಿತವು ಬಾರಬಂಕಿ ರಾಮ್‌ ಸನೇಹಿ ಘಾಟ್‌ನಲ್ಲಿರುವ ಗರೀಬ್ ನವಾಝ್ ಅಲ್ ಮಹ್ರೂಫ್ ಮಸೀದಿಯನ್ನು ಧ್ವಂಸಗೊಳಿಸಿತ್ತು.



Join Whatsapp