ಕೋವಿಡ್ ನಿಯಂತ್ರಣಕ್ಕಾಗಿ ಗೋಮೂತ್ರ ಸೇವಿಸಲು ಜನತೆಗೆ ಕರೆ ನೀಡಿದ ಉತ್ತರಪ್ರದೇಶ ಬಿಜೆಪಿ ಶಾಸಕ!

Prasthutha|

ಹೊಸದಿಲ್ಲಿ : ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಈ ನಡುವೆ ಉತ್ತರ ಪ್ರದೇಶದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರೊಬ್ಬರು ಕೋವಿಡ್ ನಿಯಂತ್ರಣಕ್ಕಾಗಿ ‘ಗೌಮುತ್ರಾ’ (ಗೋಮೂತ್ರ) ಕುಡಿಯುವಂತೆ ಜನರಿಗೆ ಕರೆ ನೀಡಿದ್ದಾರೆ. ಬಲ್ಲಿಯಾ ಜಿಲ್ಲೆಯ ಬೈರಿಯಾ ದ ಶಾಸಕ ಸುರೇಂದ್ರ ಸಿಂಗ್ ಅವರು ಗೋಮೂತ್ರ ಕುಡಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.

ಸುರೇಂದ್ರ ಸಿಂಗ್ ಸ್ವತಃ ಗೋಮೂತ್ರವನ್ನು ಸೇವಿಸುವ ಮೂಲಕ ಸೇವಿಸುವ ವಿಧಾನವನ್ನೂ ತಿಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಕಾಣಬಹುದು. ‘ಗೌಮುತ್ರಾ’ ಬಳಸಿ ಕೋವಿಡ್-19 ಹರಡುವುದನ್ನು ನಿಯಂತ್ರಿಸಬಹುದು ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.  ಎರಡರಿಂದ ಮೂರು ಕ್ಯಾಪ್ ಫುಲ್ ಗೋ ಮೂತ್ರವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಿಯಬೇಕು ಎಂದು ಹೇಳಿದ್ದಾರೆ.

- Advertisement -

ಗೋ ಮೂತ್ರ ಸೇವಿಸಿದ ನಂತರ ಅರ್ಧ ಗಂಟೆಗಳ ಕಾಲ ಏನನ್ನೂ ಸೇವಿಸಬೇಡಿ, ಗೋಮೂತ್ರವು ಅನೇಕ ರೋಗಗಳ ವಿರುದ್ಧ, ವಿಶೇಷವಾಗಿ ಹೃದ್ರೋಗಗಳ ವಿರುದ್ಧ ಸೂಪರ್ ಪವರ್ ಆಗಿದೆ ಎಂದು ಸುರೇಂದ್ರ ಸಿಂಗ್ ಹೇಳಿದ್ದಾರೆ.

- Advertisement -