ಮಥುರಾ: ಲೈಂಗಿಕ ಕಿರುಕುಳವನ್ನು ವಿರೋಧಿಸಿದ ಮಹಿಳೆಯನ್ನು ಟ್ರಕ್ ನಿಂದ ಹೊರದಬ್ಬಿರುವ ಕ್ರೂರ ಘಟನೆ ದೆಹಲಿ–ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಪೊಲೀಸರು ಟ್ರಕ್ ಚಾಲಕನನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ. ಫಾರ್ಮಾಸಿಟಿಕಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 27 ವರ್ಷದ ಮಹಿಳೆಯು ಔಷಧಿ ಡೆಲಿವರಿ ಮಾಡಿದ ಬಳಿಕ ವಾಪಸ್ ತೆರಳಲು ವಾಹನಕ್ಕಾಗಿ ಕಾಯುತ್ತಾ ಹೆದ್ದಾರಿ ಬಳಿ ನಿಂತಿದ್ದಾಗ ಲಿಫ್ಟ್ ಕೊಡುವುದಾಗಿ ಕಂಟೇನರ್ ಟ್ರಕ್ ಹತ್ತಿಸಿಕೊಂಡ ಚಾಲಕ, ದಾರಿ ಮಧ್ಯೆ ಆಕೆಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದಾನೆ.
ಮಹಿಳೆ ಪ್ರತಿರೋಧ ಒಡ್ಡಿದಾಗ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿ, ಟ್ರಕ್ನಿಂದ ಹೊರಗೆ ದಬ್ಬಿದ್ದಾನೆ ಎಂದು ಎಸ್ಪಿ ಶ್ರೀಷ್ ಚಂದ್ರ ಹೇಳಿದ್ದಾರೆ.
ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ, ಟ್ರಕ್ ಅನ್ನು ಪತ್ತೆ ಮಾಡಿ, ಚಾಲಕನನ್ನು ವಶಕ್ಕೆ ಪಡೆಯಲಾಗಿದೆ.