ಉತ್ತರ ಪ್ರದೇಶ | ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಗಳು ‘ಸೈಕಲ್’ ಚಿಹ್ನೆಯಿಂದ ಸ್ಪರ್ಧೆ: ಅಖಿಲೇಶ್

Prasthutha|

ಲಖನೌ: ಮುಂಬರುವ ಉತ್ತರ ಪ್ರದೇಶ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳು ತಮ್ಮ ಪಕ್ಷದ ಚಿಹ್ನೆ( ಸೈಕಲ್) ಮೂಲಕವೇ ಎಲ್ಲಾ ಒಂಬತ್ತು ಸ್ಥಾನಗಳಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಘೋಷಿಸಿದ್ದಾರೆ.

- Advertisement -


ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಖಿಲೇಶ್, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷ ಗೆಲುವಿಗಾಗಿ ಒಟ್ಟಿಗೆ ಶ್ರಮಿಸಲಿವೆ. ಈ ಉಪಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟವು ಗೆಲುವಿನೊಂದಿಗೆ ಹೊಸ ಅಧ್ಯಾಯ ಬರೆಯಲಿದೆ ಎಂದು ಬರೆದುಕೊಂಡಿದ್ದಾರೆ.

ಸೀಟು ಹಂಚಿಕೆಯು ಯಾವುದೇ ಲೆಕ್ಕಚಾರದ ಅನ್ವಯ ನಿರ್ಧಾರವಾಗಿಲ್ಲ. ಕೇವಲ ಗೆಲುವಿನ ಮಂತ್ರದೊಂದಿಗೆ ನಿರ್ಧಾರವಾಗಿದೆ. ಈ ಚುನಾವಣೆಗೆ ಇಂಡಿಯಾ ಮೈತ್ರಿಕೂಟದ ಕಾರ್ಯಕರ್ತರು ಹೊಸ ಸಂಕಲ್ಪದೊಂದಿಗೆ ಗೆಲುವಿಗಾಗಿ ಕೆಲಸ ಮಾಡಲಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

- Advertisement -


ಕಟೆಹಾರಿ (ಅಂಬೇಡ್ಕರ್ ನಗರ), ಕರ್ಹಾಲ್ (ಮೈನ್ಪುರಿ), ಮೀರಾಪುರ (ಮುಜಾಫರ್ನಗರ), ಗಾಜಿಯಾಬಾದ್, ಮಜ್ವಾನ್ (ಮಿರ್ಜಾಪುರ), ಸಿಶಾಮೌ (ಕಾನ್ಪುರ್ ನಗರ), ಖೈರ್ (ಅಲಿಗಢ), ಫುಲ್ಪುರ್ (ಪ್ರಯಾಗರಾಜ್), ಮತ್ತು ಕುಂದರ್ಕಿ (ಮೊರಾದಾಬಾದ್) ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.



Join Whatsapp