ಉತ್ತರ ಪ್ರದೇಶ: ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಸಿಗದೇ ಮಾಜಿ ಸಂಸದ ಪುತ್ರ ಸಾವು

Prasthutha|

- Advertisement -

ಲಕ್ನೋ: ಇಲ್ಲಿನ ಆಸ್ಪತ್ರೆಯಲ್ಲಿ ಬಿಜೆಪಿಯ ಮಾಜಿ ಸಂಸದರೋರ್ವರ ಪುತ್ರ ಆಸ್ಪತ್ರೆಯಲ್ಲಿ ಬೆಡ್‌ ಲಭ್ಯವಾಗದೇ ಪ್ರಾಣಬಿಟ್ಟ ಘಟನೆ ನಡೆದಿದೆ. ಬೆಡ್ ಖಾಲಿ ಇಲ್ಲ ಎಂದು ಆಸ್ಪತ್ರೆಯ ವೈದ್ಯರು ದಾಖಲಿಸಲು ನಿರಾಕರಿಸಿದ್ದು, ಗಂಭೀರವಸ್ಥೆಯಲ್ಲಿದ್ದ ರೋಗಿ ಸೂಕ್ತ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ.

ಮಾಜಿ ಸಂಸದ ಭೈರೋನ್‌ ಪ್ರಸಾದ್‌ ಮಿಶ್ರಾ ಪುತ್ರ ಪ್ರಕಾಶ್ ಮಿಶ್ರಾ ಮೃತರಾದವರು. ಸಂಜಯ್‌ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಯಾವುದೇ ತುರ್ತು ಹಾಸಿಗೆಗಳು ಲಭ್ಯವಿಲ್ಲ ಎಂದು ಕರ್ತವ್ಯ ನಿರತ ಅಧಿಕಾರಿಗಳು ಹೇಳಿ ಸಂಸದರ ಮಗನನ್ನು ದಾಖಲಿಸಲು ನಿರಾಕರಿಸಿದ್ದಾರೆ.

- Advertisement -

ಮಾಜಿ ಸಂಸದರು ತಮ್ಮ ಮಗ 40 ವರ್ಷದ ಪ್ರಕಾಶ್ ಮಿಶ್ರಾ ಅವರನ್ನು ಆಸ್ಪತ್ರೆಗೆ ಕೆರೆದುಕೊಂಡು ಬಂದಿದ್ದರು. ಅವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು.

ನಿಧನರಾದ ಅವರು ಆಸ್ಪತ್ರೆಯಲ್ಲಿ ಮಾಜಿ ಸಂಸದರು ಧರಣಿ ಕುಳಿತಿದ್ದರು.
ಹಿರಿಯ ಅಧಿಕಾರಿಗಳು ಬಂದು ಅವರನ್ನು ಭೇಟಿಯಾದ ಬಳಿಕ ಭೈರೋನ್ ಪ್ರಸಾದ್ ಗಂಟೆಗೆ ಧರಣಿಯನ್ನು ಕೊನೆಗೊಳಿಸಿದ್ದಾರೆ.

ಲಕ್ನೋ ಜಿಲ್ಲಾಡಳಿತವು ಘಟನೆಯ ಕುರಿತು ಉನ್ನತ ಮಟ್ಟದ ತನಿಖೆಗೆ ಸೂಚಿಸಿದೆ.

ಭೈರೋನ್ ಪ್ರಸಾದ್ ಅವರು 2014 ಮತ್ತು 2019ರ ನಡುವೆ ಬಂಡಾ ಕ್ಷೇತ್ರದ ಸಂಸದರಾಗಿದ್ದರು.

Join Whatsapp