ಉ.ಪ್ರ ಚುನಾವಣೆ: ಮತಗಟ್ಟೆಯೊಳಗಿನ ಚಿತ್ರಗಳನ್ನು ಹಂಚಿಕೊಂಡ ಮೇಯರ್‌ ವಿರುದ್ಧ ಪ್ರಕರಣ ದಾಖಲು

Prasthutha|

- Advertisement -

ಲಖ್ನೋ: ಮತಗಟ್ಟೆಯೊಳಗಿನ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಮೇಯರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಕಾನ್ಪುರ ಮೇಯರ್‌ ಪ್ರಮೀಳಾ ಪಾಂಡೆ ಕಾನ್ಪುರದ ಹಡ್ಸನ್ ಶಾಲೆಯಲ್ಲಿ ಮತದಾನ ಮಾಡುತ್ತಿರುವಾಗ ತೆಗೆದ ಇವಿಎಂ ಫೋಟೋ ಮತ್ತು ವೀಡಿಯೋ ತೆಗೆದುಕೊಂಡು ಟ್ವಿಟರ್‌, ವಾಟ್ಸಾಪ್‌ ಗಳಲ್ಲಿ ಹಂಚಿಕೊಂಡಿದ್ದಾರೆ.

- Advertisement -
https://twitter.com/mayorkanpur/status/1495246932629135361?ref_src=twsrc%5Etfw%7Ctwcamp%5Etweetembed%7Ctwterm%5E1495246932629135361%7Ctwgr%5E%7Ctwcon%5Es1_&ref_url=https%3A%2F%2Fnaanugauri.com%2Futtar-pradesh-election-kanpur-mayor-shares-photos-videos-inside-polling-booth-case-filed

ಮೇಯರ್ ಪ್ರಮೀಳಾ ಪಾಂಡೆ ವಿರುದ್ಧ ಹಡ್ಸನ್ ಸ್ಕೂಲ್ ಮತಗಟ್ಟೆಯಲ್ಲಿ ಮತದಾನದ ಗೌಪ್ಯತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಎಫ್‌ಐಆರ್ ದಾಖಲಿಸಲಾಗುತ್ತಿದೆ ಎಂದು ಕಾನ್ಪುರ ನಗರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದ ಏಳು ಹಂತಗಳ ಚುನಾವಣೆಯಲ್ಲಿ ಇಂದು ಮೂರನೇ ಹಂತದ ಮತದಾನ ನಡೆಯುತ್ತಿದೆ.

Join Whatsapp