ಉತ್ತರ ಪ್ರದೇಶ: 60ರ ವೃದ್ಧರನ್ನು 25ರ ಯುವಕರನ್ನಾಗಿ ಮಾಡೋದಾಗಿ ದಂಪತಿ ವಂಚನೆ  

Prasthutha|

ಲಕ್ನೋ: ಚಿಕಿತ್ಸೆ ಮೂಲಕ 60ರ ವೃದ್ಧರನ್ನು 25ರ ಯುವಕರನ್ನಾಗಿ ಮಾಡೋದಾಗಿ ಹೇಳಿ ನೂರಾರು ವೃದ್ಧರಿಗೆ 35 ಕೋಟಿ ರೂ. ವಂಚಿಸಿದ ಪ್ರಕರಣ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.

- Advertisement -

ವಂಚಿಸಿದ ದಂಪತಿಯನ್ನು ರಾಜೀವ್ ಕುಮಾರ್ ದುಬೆ ಮತ್ತು ಆತನ ಪತ್ನಿ ರಶ್ಮಿ ದುಬೆ ಎಂದು ಗುರುತಿಸಲಾಗಿದೆ.

ಇಬ್ಬರೂ ಕಾನ್ಪುರದಲ್ಲಿ ಥೆರಪಿ ಸೆಂಟರ್‌ ರನ್ನು ತೆರದಿದ್ದರು. ಬಳಿಕ ಇಸ್ರೇಲ್‌ ನಿಂದ ತರಲಾದ ಯಂತ್ರವನ್ನು ಬಳಸಿ 60 ವರ್ಷದ ವ್ಯಕ್ತಿಯನ್ನು 25 ವರ್ಷ ವಯಸ್ಸಿನವರನ್ನಾಗಿ ಪರಿವರ್ತಿಸುತ್ತೇವೆ ಎಂದು ವೃದ್ಧರನ್ನು ನಂಬಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಕಲುಷಿತ ಗಾಳಿಯಿಂದಾಗಿ ಜನರಿಗೆ ವೇಗವಾಗಿ ವಯಸ್ಸಾಗುತ್ತಿದೆ. ಆಕ್ಸಿಜನ್ ಥೆರಪಿ ಮೂಲಕ ಕೆಲವೇ ತಿಂಗಳೊಳಗೆ ಯುವಕರನ್ನಾಗಿ ಪರಿವರ್ತಿಸುತ್ತೇವೆ ಎಂದು ಹೇಳಿ ವೃದ್ಧರನ್ನು ನಂಬಿಸಿ ವಂಚಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.



Join Whatsapp