ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಟ್ವಿಟರ್ ಖಾತೆ ಹ್ಯಾಕ್ !

Prasthutha|

ಲಕ್ನೋ:  ಉತ್ತರ ಪ್ರದೇಶದ ಮುಖ್ಯಮಂತ್ರಿ ಕಚೇರಿಯ ಅಧಿಕೃತ ಟ್ವಿಟರ್ ಶುಕ್ರವಾರ ತಡರಾತ್ರಿ ಹ್ಯಾಕ್  ಆಗಿದೆ.

- Advertisement -

ಹ್ಯಾಕರ್‌ ಗಳು ಮುಖ್ಯಮಂತ್ರಿ ಕಚೇರಿಯ ಖಾತೆಯಿಂದ 400-500 ಟ್ವೀಟ್‌ ಗಳನ್ನು ಮಾಡಿದ್ದರು ಎಂದು ತಿಳಿದು ಬಂದಿದೆ.

‘ರಾತ್ರಿ ಸುಮಾರು 29 ನಿಮಿಷಗಳ ಕಾಲ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಹ್ಯಾಕರ್‌ ಗಳು ಸುಮಾರು 400-500 ಟ್ವೀಟ್‌ ಗಳನ್ನು ಪೋಸ್ಟ್ ಮಾಡಿದ್ದರು ಮತ್ತು ಅಸ್ವಾಭಾವಿಕ ಚಟುವಟಿಕೆಯ ಆಧಾರದ ಮೇಲೆ ಖಾತೆಯನ್ನು ಅಮಾನತುಗೊಳಿಸಲಾಗಿತ್ತು’ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Join Whatsapp