ಪಾವಗಡ ಬಸ್ ಅಪಘಾತ: ಮೃತರ ಕುಟುಂಬಗಳಿಗೆ 25 ಲಕ್ಷ ರೂ.ಪರಿಹಾರಕ್ಕೆ ಯು.ಟಿ.ಖಾದರ್ ಆಗ್ರಹ

Prasthutha|

ಬೆಂಗಳೂರು: ಪಾವಗಡ ಬಸ್ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ವಿಧಾನಸಭೆ ಉಪ ನಾಯಕ ಯು.ಟಿ ಖಾದರ್ ಆಗ್ರಹಿಸಿದ್ದಾರೆ.

- Advertisement -

ವಿಧಾನಸಭೆ ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಅವರು, ಈ ಘಟನೆ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಸರ್ಕಾರ ಮಾಡಬೇಕು. ಘಟನೆಯ ಹಿನ್ನೆಲೆಯಲ್ಲಿ ಸಾರಿಗೆ ಸಚಿವರು ಖಾಸಗಿ ಬಸ್ ಲೈಸೆನ್ಸ್ ರದ್ದು ಮಾಡಲಾಗುವುದು ಎಂದಿದ್ದಾರೆ. ಆದರೆ  ಬಸ್ ಟಾಪ್ ಮೇಲೆ ಕುಳಿತುಕೊಂಡರೆ ಕೇಸ್ ಹಾಕುತ್ತೇವೆ ಎಂದು ಸಿಎಂ ಹೇಳಿಕೆ ನೀಡುತ್ತಾರೆ. 80 ಕ್ಕೂ ಸರ್ಕಾರಿ ಬಸ್ ಈ ಹಿಂದೆ ರೂಟ್ ನ ಲ್ಲಿ ಪ್ರಯಾಣ ಮಾಡುತ್ತಿದ್ದವು. ಇವಾಗ 30-40 ಸರ್ಕಾರಿ ಬಸ್ ಮಾತ್ರ ಓಡಾಡುತ್ತಿದೆ. ಆದರೆ 150 ಕ್ಕೂ ಹೆಚ್ಚು ಖಾಸಗಿ ಬಸ್ ಓಡಾಡುತ್ತಿದೆ ಎಂದು ತಿಳಿಸಿದರು.

ಜನಸಾಮಾನ್ಯರಿಗೆ ಸರಿಯಾದ ಸಾರಿಗೆ ಸೌಲಭ್ಯ ಕೊಡದಿರುವುದು ಟಾಪ್ ನಲ್ಲಿ ಪ್ರಯಾಣ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ನಿಟ್ಟಿನಲ್ಲಿ ಉನ್ನತ ಮಟ್ಟ ಸಮಿತಿ ರಚನೆ ಮಾಡಿ ವಿವರ ಪಡೆದುಕೊಳ್ಳಬೇಕು . ಜೊತೆಗೆ ಮೃತರ ಕುಟುಂಬಕ್ಕೆ  25 ಲಕ್ಷ,  ಗಾಯಾಳುಗಳಿಗೆ 10 ಲಕ್ಷ, ಸಣ್ಣ ಪ್ರಮಾಣದ ಗಾಯಾಳುಗಳಿಗೆ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.




Join Whatsapp