ಡಿಸಿಗಳ ಜೊತೆ ಮೋದಿ ಸಂವಾದ | ‘ಕಮಾಂಡರ್ ಇನ್ ಚೀಫ್’ ಮಾಡಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ : ಯು.ಟಿ ಖಾದರ್

Prasthutha|

ಮಂಗಳೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸಿಗಳೊಂದಿಗೆ ನಡೆಸಿದ ವೀಡಿಯೋ ಕಾನ್ಫರೆನ್ಸ್ ಬಗ್ಗೆ ಮಾಜಿ ಸಚಿವ ಯು.ಟಿ ಖಾದರ್ ಟೀಕಿಸಿದ್ದಾರೆ.  ಡಿಸಿಯವರನ್ನ ಕಮಾಂಡರ್ ಇನ್ ಚೀಫ್ ಎಂದು ಪ್ರಧಾನ ಮಂತ್ರಿಗಳು ಹೇಳಿದ್ದಾರೆ. ಡಿ.ಸಿ.ಯವರಿಗೆ ಈ ಹಿಂದೇನೆ ಮ್ಯಾಜಿಸ್ಟ್ರೇಟ್ ಪವರ್ ಇತ್ತು. ಕಮಾಂಡರ್ ಇನ್ ಚೀಫ್ ಮಾಡಿ ಮತ್ತೆ ಯಾವ ಪವರ್ ಕೊಟ್ಟಿದ್ದೀರಾ ? ಮಾಜಿ ಸಚಿವ ಯು.ಟಿ ಖಾದರ್ ಪ್ರಶ್ನಿಸಿದ್ದಾರೆ.

ಕಮಾಂಡರ್ ಇನ್ ಚೀಫ್ ಎಂದು ಹೇಳಿ ನೀವು ಕೊಟ್ಟ ಪವರ್ ಏನು ? ತಹಶಿಲ್ದಾರ್, ಎಸಿ ಕೆಲಸ ಮಾಡದೆ ಇದ್ದರೆ ಅವರ ಮೇಲೆ ಆ್ಯಕ್ಷನ್ ತೆಗೆದುಕೊಳ್ಳುವ ಪವರ್ ಕೂಡ ಡಿ.ಸಿ ಯವರಿಗೆ ಇಲ್ಲ. DHO‌ ಮತ್ತು ಡಾಕ್ಟರ್ ಕೆಲಸ ಮಾಡದೆ ಇದ್ರೆ ಅವರನ್ನ ವರ್ಗಾವಣೆ ಮಾಡುವ ಪವರ್ ಡಿ.ಸಿ ಗೆ ಇದೆಯಾ..? ಈ ಎಲ್ಲಾ ಪವರ್ ಕೊಡದೆ ಮತ್ತೆ ಏನು‌ ಹೊಸ ಪವರ್ ಕೊಟ್ಟಿದ್ದೀರಾ..? ಜನರ ಕಷ್ಟ ಇನ್ನೂ ಕೇಂದ್ರ ಸರಕಾರಕ್ಕೆ ಅರ್ಥವಾಗಿಲ್ಲ. ಕಮಾಂಡರ್ ಇನ್ ಚೀಫ್ ಎಂದು ಹೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೀಟಿಂಗ್ ಮೂಲಕ ಜನರನ್ನು ಮೂರ್ಖರನ್ನಾಗಿ ಮಾಡಲು ಹೊರಟಿದ್ದಾರೆ ಎಂದು ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆಗೆ ಪ್ರಧಾನ ಮಂತ್ರಿಯವರು ಸೂಚಿಸುತ್ತಾರೆ. ನಮ್ಮಲ್ಲಿ ಈಗಾಗಲೇ ಟಾಸ್ಕ್ ಫೋರ್ಸ್ ರಚಿಸಿ ಎರಡು ತಿಂಗಳೇ ಕಳೆದಿವೆ. ಇನ್ನೂ ನಮ್ಮ ಪ್ರಧಾನಿಗಳು ಎಷ್ಟು ಹಿಂದೆ ಇದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಿ ಎಂದು ಯು.ಟಿ ಖಾದರ್ ವಾಗ್ದಾಳಿ ನಡೆಸಿದ್ದಾರೆ.

- Advertisement -