ಕೇಂದ್ರ ಬಜೆಟ್ ನಿಂದ ಜನ ಸಾಮಾನ್ಯನಿಗೆ ಯಾವುದೇ ಪ್ರಯೋಜನವಿಲ್ಲ: ಯು.ಟಿ.ಖಾದರ್

Prasthutha|

- Advertisement -

ಬೆಂಗಳೂರು: ಕೇಂದ್ರ ಬಜೆಟ್ ನಿಂದ ಜನ ಸಾಮಾನ್ಯನಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಯು.ಟಿ.ಖಾದರ್ ಮಾಜಿ ಸಚಿವರೂ ರಾಜ್ಯ ವಿಧಾನ ಸಭೆಯ ವಿರೋಧ ಪಕ್ಷದ ಉಪ ನಾಯಕ ಯು.ಟಿ.ಖಾದರ್ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅವರು ಇವತ್ತು ಕೇಂದ್ರ ಸರಕಾರ ಮಂಡಿಸಿದ ಬಜೆಟ್ ನಲ್ಲಿ ಜನ ಸಾಮಾನ್ಯನಿಗೆ ಅನುಕೂಲವಾಗುವ ಯಾವ ಅಂಶವೂ ಒಳಗೊಂಡಿಲ್ಲ. ಬದಲಾಗಿ ಶ್ರೀಮಂತರ ಅನುಕೂಲಕ್ಕಾಗಿ ಮಂಡಿಸಿದಂತಿದೆ ಈ ಬಜೆಟ್. ಕೇವಲ ಕಾರ್ಪೋರೇಟ್ ತೆರಿಗೆಯನ್ನು ಮಾತ್ರ ಕಡಿಮೆ ಮಾಡಿ, ಜನಸಾಮಾನ್ಯನಿಗೆ ಬೇಕಾದ ಯಾವುದೇ ಯೋಜನೆಗಳನ್ನು ಬಿಡುಗಡೆ ಮಾಡದೆ, ಕೋವಿಡ್ ಗಿರಲಿ, ಬೆಲೆ ನಾಶಕ್ಕೀಡಾದ ರೈತರಿಗಿರಲಿ,ದೇಶದ ರಕ್ಷಣೆಯ ಇಲಾಖೆಗಿರಲಿ ಯಾವುದೇ ಮಹತ್ವದ ಯೋಜನೆಗಳನ್ನು ಒಳಗೊಂಡಿಲ್ಲ ಎಂದು ಹೇಳಿದ್ದಾರೆ.
ವರ್ಚುವಲ್ ಹಾಗೂ ಡಿಜಿಟಲ್ ಕರೆನ್ಸಿಯನ್ನು ಕಾನೂನುಬದ್ಧಗೊಳಿಸುವ ಮೂಲಕ ಕಪ್ಪುಹಣವನ್ನು ಬಿಳಿಯನ್ನಾಗಿಸಲು ಪೂರಕವಾದಂತಿದೆ ಈ ಬಜೆಟ್. ದೇಶದ ಎಪ್ಪತ್ತೈದು ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಳಪೆ ಬಜೆಟ್ ಎಂದು ಯು.ಟಿ.ಖಾದರ್ ಅಭಿಪ್ರಾಯ ಪಟ್ಟರು.



Join Whatsapp