ಪೆಟ್ರೋಲ್ ಟ್ಯಾಕ್ಸ್ ಮೂಲಕ ಸರ್ಕಾರ ಜನರಿಂದ ಲೂಟಿ ಮಾಡುತ್ತಿದೆ : ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ

Prasthutha|

ಮಂಗಳೂರು : ಪೆಟ್ರೋಲ್ ಟ್ಯಾಕ್ಸ್ ಮೂಲಕ ಸರ್ಕಾರ ಜನರಿಂದ ಲೂಟಿ ಮಾಡುತ್ತಿದೆ. ದೇಶದ ಇತಿಹಾಸದಲ್ಲಿ ಯಾರೂ ಕಾಣದ ಸಾಧನೆಯನ್ನು ಕೇಂದ್ರ ಸರ್ಕಾರ ಮಾಡಿದ್ದು, ತೈಲ ಬೆಲೆ ಏರಿಕೆ ಮಾಡಿ ಖಜಾನೆ ತುಂಬುತ್ತಿದ್ದಾರೆ. ಪೆಟ್ರೋಲ್ ಪಂಪ್ ತೆರಿಗೆ ಸಂಗ್ರಹಿಸುವ ಕೇಂದ್ರ ಆಗಿದೆ ಎಂದು ಮಾಜಿ ಸಚಿವ ಯುಟಿ ಖಾದರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಗಾಗಿ ಜನರು ದಿನವಿಡೀ ದುಡಿಯುವಂತಾಗಿದೆ. ತೈಲ ಬೆಲೆ ಏರಿಕೆ ಮಾಡುವ ಮೂಲಕ ದೇಶದ ಜನರ ಮೇಲೆ ಬರೆ ಎಳೆಯಲಾಗಿದೆ. ಸರ್ಕಾರ ಟ್ಯಾಕ್ಸ್ ಹಾಕುವ ಮೂಲಕ ಜನರಿಂದ ಲೂಟಿ ಮಾಡುತ್ತಿದೆ. ಜನರು ಕಷ್ಟದ ಪರಿಸ್ಥಿತಿಯಲ್ಲಿ ಬದುಕುತ್ತಿರುವ ಈ ಸಂದರ್ಭದಲ್ಲಿ ತೆರಿಗೆ ಸಂಗ್ರಹಿಸುತ್ತಿದ್ದಾರೆಯೇ ವಿನಹ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಆಡಳಿತ ನಡೆಸಲು ಸಾಧ್ಯವಿಲ್ಲ. ಸಮಸ್ಯೆ ಆದಾಗ ಜನರಿಗೆ ಭಾರ ಹಾಕದೇ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ. ಜನರು ದಂಗೆ ಏಳುವ ಮುಂಚೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಅದೇ ರೀತಿ ಬೆಲೆ ಏರಿಕೆಯನ್ನು ಸಮರ್ಥನೆ ಮಾಡುವವರು ಈ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದಾರೆ.

- Advertisement -

ಮೀನುಗಾರರು ಸ್ವಾಭಿಮಾನ, ನಿಯತ್ತಿನಿಂದ ದುಡಿಯುತ್ತಿದ್ದು, ಅವರಿಗೆ ಸರಿಯಾದ ಸಮಯದಲ್ಲಿ ಸಬ್ಸಿಡಿ ನೀಡಲಿಲ್ಲ. ಮೀನುಗಾರರಿಗೆ ಅನ್ಯಾಯ ಮಾಡಿದವರು ಕ್ಷಮೆ ಕೇಳಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ.

Join Whatsapp