ಬಾಯಿಯಲ್ಲಿ ಹುಣ್ಣು ಆಗಿಬಿಟ್ಟರೆ ಈ ಮನೆಮದ್ದು ಬಳಸಿ

Prasthutha|

ಬಾಯಿ ಹುಣ್ಣು ಒಂದು ಸಾಮಾನ್ಯ ಸಮಸ್ಯೆ. ಬಾಯಿ ಹುಣ್ಣು ಇದ್ದರೆ ಯಾವುದೇ ಆಹಾರವನ್ನು ತಿನ್ನಲು ಆಗುವುದಿಲ್ಲ. ನಾವು ಸೇವಿಸುವ ಆಹಾರದಲ್ಲಿ ಸ್ವಲ್ಪ ಉಪ್ಪು ಮಸಾಲೆ ಇದ್ದರಂತೂ ಉರಿಯುತ್ತದೆ. ಆಹಾರವನ್ನು ಜಗಿಯಲೂ ಕಷ್ಟವಾಗುತ್ತದೆ, ಅಲ್ಲದೆ ಮಾತನಾಡಲೂ ಕಷ್ಟವಾಗುತ್ತದೆ. ಕೆಲವರಿಗೆ ಈ ಸಮಸ್ಯೆ ಕೆಲವರಿಗೆ ಪದೇ ಪದೇ ಕಾಡುತ್ತಿದ್ದರೆ ಮತ್ತೆ ಕೆಲವರಿಗೆ ಎರಡು-ಮೂರು ತಿಂಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ.

- Advertisement -


ಬಾಯಿ ಹುಣ್ಣಿಗೆ ನಿರ್ದಿಷ್ಟ ಕಾರಣ ಏನೂ ಎಂಬುದು ಇನ್ನೂ ಸರಿಯಾಗಿ ತಿಳಿದಿಲ್ಲ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ಮತ್ತು ಬಾಯಿ ಹುಣ್ಣುಗಳು ಉಂಟಾಗಲು ವಿವಿಧ ಕಾರಣಗಳು ಇರುತ್ತವೆ. ಇದು ಸಾಮಾನ್ಯವಾಗಿ ಹಾರ್ಮೋನುಗಳ ಅಸಮತೋಲನ, ಆಮ್ಲೀಯತೆ, ಮಲಬದ್ಧತೆ, ವಿಟಮಿನ್ ಬಿ ಮತ್ತು ಸಿ ಕೊರತೆ, ಜೊತೆಗೆ ಕಬ್ಬಿಣ ಮತ್ತು ಇತರ ಪೋಷಕಾಂಶಗಳ ಕೊರತೆಯಿಂದ ಉಂಟಾಗುತ್ತದೆ. ಬಾಯಿ ಹುಣ್ಣು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರಬಹುದು.

ಈ ಮನೆಮದ್ದು ಬಳಸಿ

- Advertisement -


ಒಂದು ಲೋಟ ಉಗುರು ಬೆಚ್ಚಗಿನ ನೀರು ತೆಗೆದುಕೊಂಡು ಅದರಲ್ಲಿ ಒಂದು ಟೇಬಲ್ ಚಮಚ ಉಪ್ಪು ಹಾಕಿ ಚೆನ್ನಾಗಿ ಕಲಸಿ ಅದರಿಂದ ಬಾಯಿ ಮುಕ್ಕಳಿಸುವುದರಿಂದ ನೋವು ಮತ್ತು ಅಲ್ಸರ್ ಬೇಗನೆ ಪರಿಹಾರವಾ ಗುತ್ತದೆ. ಉಪ್ಪಿನ ನೀರಿನಲ್ಲಿರುವ ಆಂಟಿ ಬ್ಯಾಕ್ಟೀರಿಯಲ್ ಗುಣಲಕ್ಷಣಗಳು ನೋವನ್ನು ಕಡಿಮೆ ಮಾಡುತ್ತವೆ. ಹಾಗೂ ಕೂಡ ಒಂದು ವೇಳೆ ಕಡಿಮೆ ಆಗದೆ ಇದ್ದ ಪಕ್ಷದಲ್ಲಿ ವೈದ್ಯರ ಸಲಹೆ ಪಡೆದುಕೊಳ್ಳುವುದು ಒಳ್ಳೆಯದು.


ಬಾಯಿ ಹುಣ್ಣಿನ ನೋವಿನ ತಕ್ಷಣ ಕಡಿಮೆಯಾಗಲು ಸ್ವಚ್ಛವಾದ ಹತ್ತಿಯನ್ನು ಜೀನುತುಪ್ಪಕ್ಕೆ ಅದ್ದಿ ನೋವಿರುವ ಭಾಗಕ್ಕೆ ಇಟ್ಟುಕೊಳ್ಳಬೇಕು.ಹೀಗೆಯೇ ತುಪ್ಪವನ್ನು ಬಾಯಿ ಹುಣ್ಣಿಗೆ ಹಚ್ಚಿಕೊಂಡರೂ ನೋವು ಉಪಶಮನವಾಗುತ್ತದೆ. ತೆಂಗಿನ ಎಣ್ಣೆಯನ್ನು ಬಾಯಿ ಹುಣ್ಣಿಗೆ ಹಚ್ಚಿಕೊಂಡರೆ ನೋವು ಬೇಗ ತಣಿಯುತ್ತದೆ. ಹಾಗೆಯೇ ಸ್ವಲ್ಪ ಅಲೋವೆರಾದ ತಾಜಾ ತಿರುಳನ್ನು (ಲೋಳೆಸರ) ಹುಣ್ಣಿನ ಮೇಲೆ ದಿನವೂ ಹಚ್ಚುತ್ತಿದ್ದರೆ ಒಂದೆರಡು ದಿನಗಳಲ್ಲಿ ವಾಸಿವಾಗಬಹುದು. ಅಲೋವೆರಾ ಕೂಡ ದೇಹವನ್ನು ತಂಪಾಗಿರಿಸಲು ಸಹಕಾರಿ.


ಬಾಯಿ ಹುಣ್ಣು ಆದಾಗ ಎಳನೀರು ಕುಡಿದರೆ ಬಹಳ ಒಳ್ಳೆಯದು. ದಿನಕ್ಕೆ ಎರಡು ಅಥವಾ ಮೂರು ಸಲ ತಾಜಾ ಮಜ್ಜಿಗೆಯನ್ನೂ ತೆಗೆದುಕೊಳ್ಳಬಹುದು. ಇದರಿಂದ ದೇಹದ ತಾಪಮಾನ ಕಡಿಮೆಯಾಗಿ ಬಾಯಿಯಲ್ಲಿನ ಹುಣ್ಣುಗಳು ವಾಸಿಯಾಗಲು ಸಹಾಯವಾಗುತ್ತದೆ.



Join Whatsapp