ಭಾರತಕ್ಕೆ 3.99 ಬಿಲಿಯನ್ ಡಾಲರ್ ಮೌಲ್ಯದ ’31 MQ-9B ಸಶಸ್ತ್ರ ಡ್ರೋನ್ ಮಾರಾಟ‌ ಮಾಡಲಿರುವ ಅಮೆರಿಕ

Prasthutha|

ನವದೆಹಲಿ : 3.99 ಬಿಲಿಯನ್ ವೆಚ್ಚದಲ್ಲಿ ಭಾರತಕ್ಕೆ 31 ಎಂಕ್ಯೂ -9 ಬಿ ಸಶಸ್ತ್ರ ಡ್ರೋನ್ಗಳನ್ನು(MQ-9B armed drones) ಮಾರಾಟ ಮಾಡಲು ಯುಎಸ್ ಅನುಮೋದನೆ ನೀಡಿದೆ ಎಂದು ಅಮೆರಿಕದ ರಕ್ಷಣಾ ಸಂಸ್ಥೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಮಾಧ್ಯಮ ವರದಿ ಮಾಡಿದೆ.

- Advertisement -

ಸಿಖ್ ಪ್ರತ್ಯೇಕತಾವಾದಿ ಗುರು ಪತ್ವಂತ್ ಸಿಂಗ್ ಪನ್ನುನ್ ಅವರ ಹತ್ಯೆಯ ವಿಫಲ ಸಂಚಿನೊಂದಿಗೆ ಭಾರತದ ಸಂಪರ್ಕದ ಬಗ್ಗೆ ನವದೆಹಲಿ ಸಮಗ್ರ ತನಿಖೆ ನಡೆಸುವವರೆಗೆ ವಾಷಿಂಗ್ಟನ್ ಭಾರತಕ್ಕೆ ಡ್ರೋನ್ ಮಾರಾಟವನ್ನ ನಿರ್ಬಂಧಿಸಿದೆ ಎಂಬ ಮಾಧ್ಯಮ ವರದಿಗಳ ಮಧ್ಯೆ ಈ ಪ್ರಮುಖ ಬೆಳವಣಿಗೆ ಸಂಭವಿಸಿದೆ.

ಕಳೆದ ವರ್ಷ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟನ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಡ್ರೋನ್ ಒಪ್ಪಂದವನ್ನು ಘೋಷಿಸಲಾಗಿತ್ತು.

- Advertisement -

Join Whatsapp