ಲೆವಿಸ್ಟನ್: ಅಮೆರಿಕದ ಮೈನೆ ರಾಜ್ಯದಲ್ಲಿನ ಲೆವಿಸ್ಟನ್ ನಗರದ ರೆಸ್ಟೋರೆಂಟ್ ಮತ್ತು ‘ಬೌಲಿಂಗ್ ಅಲೈ’ ಕೇಂದ್ರದ ಮೇಲೆ ದಾಳಿ ನಡೆಸಿ 18 ಜನರನ್ನು ಹತ್ಯೆಗೈದಿದ್ದ ಬಂದೂಕುಧಾರಿ ಶವವಾಗಿ ಪತ್ತೆಯಾಗಿದ್ದಾನೆ.
ಸ್ವಯಂ ಪ್ರೇರಿತವಾಗಿ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿವೆ.
ಕಳೆದ ಎರಡು ದಿನಗಳಿಂದ ಪೊಲೀಸರು ಆರೋಪಿ ರಾಬರ್ಟ್ ಕಾರ್ಡ್ (40) ಪತ್ತೆಗಾಗಿ ತೀವ್ರ ಶೋಧ ನಡೆಸಿದ್ದರು. ಆದರೆ, ಲೆವಿಸ್ಟನ್ ನಗರದಿಂದ 8 ಕಿ.ಮೀ ದೂರದ ಕಾಡಿನಲ್ಲಿ ಕಾರ್ಡ್ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.