ನ್ಯೂಜೆರ್ಸಿಯ ಇಂಡಿಯಾ ಡೇ ಪೆರೇಡ್ ಲ್ಲಿ ಬುಲ್ಡೋಜರ್ ಪ್ರದರ್ಶನ: ಯುಎಸ್ ಸೆನೆಟರ್ ಗಳಿಂದ ಖಂಡನೆ

Prasthutha|

ವಾಷಿಂಗ್ಟನ್: ನ್ಯೂಜೆರ್ಸಿಯ ಎಡಿಸನ್ ನಲ್ಲಿ ಕಳೆದ ತಿಂಗಳು ನಡೆದ ಇಂಡಿಯಾ ಡೇ ಪೆರೇಡ್ ನಲ್ಲಿ ಬುಲ್ಡೋಜರ್ ಪ್ರದರ್ಶಿಸಿದ್ದನ್ನು ಅಮೆರಿಕದ ಇಬ್ಬರು ಪ್ರಮುಖ ಸೆನೆಟರ್ ಗಳು ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಕಳೆದ ತಿಂಗಳು ಎಡಿಸನ್ ನಲ್ಲಿ ನಡೆದ ಇಂಡಿಯಾ ಡೇ ಪೆರೇಡ್ ನಲ್ಲಿ ಬುಲ್ಡೋಜರ್ ಪ್ರದರ್ಶನವನ್ನು ವಿರೋಧಿಸಿ  ನ್ಯೂಜೆರ್ಸಿಯ ದಕ್ಷಿಣ ಏಷ್ಯಾ ಸಮುದಾಯದ ನಾಯಕರು ಮತ್ತು ಸದಸ್ಯರನ್ನು ಈ ವಾರ ಭೇಟಿಯಾದರು ಎಂದು ಸೆನೆಟರ್ ಗಳಾದ ಮೆನೆಂಡೆಜ್ ಮತ್ತು ಬೂಕರ್ ಶುಕ್ರವಾರ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬುಲ್ಡೋಜರ್ ಗಳು ದ್ವೇಷದ ಸಂಕೇತವಾಗಿ ಮಾರ್ಪಟ್ಟಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ಯಂತ್ರಗಳನ್ನು ಕೆಲವು ಸಮುದಾಯಗಳನ್ನು ಬೆದರಿಸಲು ಬಳಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆಯಾದರೂ, ಸರ್ಕಾರ ಅದನ್ನು ತಳ್ಳಿ ಹಾಕಿದೆ.

- Advertisement -

ಬುಲ್ಡೋಜರ್ ಭಾರತದಲ್ಲಿ ಮುಸ್ಲಿಮರು ಮತ್ತು ಇತರ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಬೆದರಿಕೆಯ ಸಂಕೇತವಾಗಿದೆ, ಮತ್ತು ಈ ಕಾರ್ಯಕ್ರಮದಲ್ಲಿ ಅದನ್ನು ಸೇರಿಸಿರುವುದು ತಪ್ಪು. ಎಲ್ಲಾ ಜನಾಂಗೀಯ ಮತ್ತು ಧಾರ್ಮಿಕ ಗುಂಪುಗಳು ಇಲ್ಲಿ ಯಾವುದೇ ಬೆದರಿಕೆ ಅಥವಾ ಭಯವಿಲ್ಲದೆ ಬದುಕುವ ಹಕ್ಕನ್ನು ಹೊಂದಿವೆ ಎಂದು ಇಬ್ಬರು ಸೆನೆಟರ್ ಗಳು ಉಲ್ಲೇಖಿಸಿದ್ದಾರೆ.

ಆಗಸ್ಟ್ 14 ರಂದು ಓಕ್ ಟ್ರೀ ರಸ್ತೆಯಲ್ಲಿ ನಡೆದ ‘ಇಂಡಿಯಾ ಡೇ ಪರೇಡ್’ಸಂದರ್ಭದಲ್ಲಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಿತ್ರಗಳನ್ನು ಹೊಂದಿರುವ ಬುಲ್ಡೋಜರ್ ಅನ್ನು ಪ್ರದರ್ಶಿಸಲಾಗಿತ್ತು. ಇದಕ್ಕೆ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು.

 ಈ ಮಧ್ಯೆ ಘಟನೆಯ ಕುರಿತು ಕಾರ್ಯಕ್ರಮದ ಆಯೋಜಕರಾದ ‘ಇಂಡಿಯನ್ ಬ್ಯುಸಿನೆಸ್ ಅಸೋಸಿಯೇಷನ್’ ಕ್ಷಮೆಯಾಚಿಸಿದೆ.




Join Whatsapp