ಅಮೆರಿಕದ ಶಾಲೆಯೊಂದರಲ್ಲಿ ಶೂಟೌಟ್: 12ರ ಹರೆಯದ ಬಾಲಕನಿಂದ ಸಹಪಾಠಿಯ ಗುಂಡಿಕ್ಕಿ ಹತ್ಯೆ !

Prasthutha|

ಸೌತ್ ಕೆರೊಲಿನಾ (ಅಮೆರಿಕ): 12ರ ಹರೆಯದ ದಕ್ಷಿಣ ಕೆರೊಲೊನಾ ಮಿಡ್ಲ್ ಶಾಲೆಯ ವಿದ್ಯಾರ್ಥಿಯೊಬ್ಬ, 12 ವರ್ಷದ ತನ್ನ ಸಹಪಾಠಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನೆಯ ಒಂದು ಗಂಟೆಯ ಬಳಿಕ ಗ್ರೀನ್ ವಿಲ್ಲೆಯ ಟ್ಯಾಂಗಲ್ ವುಡ್ ಮಿಡ್ಲ್ ಶಾಲೆಯಿಂದ ಅಣತಿ ದೂರದಲ್ಲಿರುವ ಮನೆಯ ಮೇಲ್ಛಾವಣಿ ಕೆಳಗಡೆ ಅವಿತುಕೊಂಡಿದ್ದ ಶಸ್ತ್ರಾಸ್ತ್ರನಾಗಿದ್ದ ಕೊಲೆಗಾರ ಪತ್ತೆಯಾಗಿದ್ದ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಶೆರಿಫ್ ಹೋಬಾರ್ಟ್ ಲೂಯಿಸ್ ತಿಳಿಸಿದ್ದಾರೆ.

ಸದ್ಯ ಕೊಲೆ ನಡೆಸಿದ ಬಾಲಕನ ವಿರುದ್ಧ ಕೊಲೆ, ಶಾಲೆಗೆ ಅಕ್ರಮ ಬಂದೂಕು ಸಾಗಾಟ, ಮತ್ತು ಅಪ್ರಾಪ್ತರು ಆಯುಧ ಶೇಖರಿಸಿದ್ದ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಲಂಬಿಯಾ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಲೂಯಿಸ್ ತಿಳಿಸಿದ್ದಾರೆ.

- Advertisement -

ಘಟನೆಯ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದಿವರಿಸಿದ್ದಾರೆ ಎಂದು ಶೆರಿಫ್ ತಿಳಿಸಿದ್ದಾರೆ.

Join Whatsapp