ಉಕ್ರೇನ್ ನಿರಾಶ್ರಿತರ ಕುರಿತ ಗಂಭೀರ ಪ್ರಶ್ನೆಗೆ ನಕ್ಕು ಟೀಕೆಗೆ ಒಳಗಾದ ಅಮೆರಿಕ ಉಪಾಧ್ಯಕ್ಷೆ !

Prasthutha|

ವಾರ್ಸಾ: ಯುದ್ಧಪೀಡಿತ ಉಕ್ರೇನ್ ನ ನಿರಾಶ್ರಿತರ ಕುರಿತಾಗಿ ಕೇಳಿದ ಪ್ರಶ್ನೆಯೊಂದಕ್ಕೆ ವಿಚಿತ್ರವಾಗಿ ನಕ್ಕ ಅಮೆರಿಕಾ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವ್ಯಾಪಕ ಟೀಕೆಗೆ ತುತ್ತಾಗಿದ್ದಾರೆ. ಉಕ್ರೇನ್ ನಿರಾಶ್ರಿತರನ್ನು ಅಮೇರಿಕಾ ತನ್ನ ದೇಶಕ್ಕೆ ಸೇರಿಸಿಕೊಳ್ಳುತ್ತದೆಯೇ ಎಂದು ಕಮಲಾ ಹ್ಯಾರಿಸ್ ರನ್ನು ಸಂವಾದವೊಂದರಲ್ಲಿ ಪ್ರಶ್ನಿಸಲಾಗಿತ್ತು, ಆದರೆ ಇದಕ್ಕೆ ಕಮಲಾ ಹ್ಯಾರಿಸ್ ನಕ್ಕಿದ್ದಾರೆ. ಅಮೆರಿಕ ಉಪಾಧ್ಯಕ್ಷೆಯ ಪ್ರತಿಕ್ರಿಯೆಗೆ ನೆಟ್ಟಿಗರು ಕೆಂಡಾಮಂಡಲವಾಗಿದ್ದು ಉನ್ನತ ಸ್ಥಾನದಲ್ಲಿರುವ ಅವರ ಪ್ರತಿಕ್ರಿಯೆ ಅಸೂಕ್ಷ್ಮವಾಗಿದೆ ಎಂದಿದ್ದಾರೆ.

- Advertisement -

ಪೋಲಿಷ್ ಅಧ್ಯಕ್ಷರೊಂದಿಗೆ ಪತ್ರಿಕಾಗೋಷ್ಟಿಯಲ್ಲಿ ಭಾಗವಹಿಸಿದ್ದ ಕಮಲಾ ಹ್ಯಾರಿಸ್ ಮಿತ್ರರಾಷ್ಟ್ರಗಳಿಗೆ ನ್ಯಾಟೋ ಹಾಗೂ ಯುಎಸ್ ಬೆಂಬಲದ ಬಗ್ಗೆ ಮಾಹಿತಿ ಹಂಚುತ್ತಿದ್ದರು. ಈ ವೇಳೆ ಅಮೆರಿಕವು ಉಕ್ರೇನ್ ನಿರಾಶ್ರಿತರಿಗೆ ಆಶ್ರಯ ನೀಡಲಿದೆಯೇ?’ ಎಂದು ಪತ್ರಕರ್ತರೊಬ್ಬರು ಪ್ರಶ್ನಿಸಿದ್ದಾರೆ, ಅಲ್ಲದೇ ಅಮೇರಿಕಾಗೆ ನಿರಾಶ್ರಿತರನ್ನು ಸ್ವೀಕರಿಸುವಂತೆ ಪೋಲಿಷ್ ಅಧ್ಯಕ್ಷರಿಗೆ ನೀವು ಹೇಳಿದ್ದೀರಾ ಎಂದು ಪತ್ರಕರ್ತರು ಕೇಳಿದ್ದಾರೆ.

ಪತ್ರಕರ್ತರ ಪ್ರಶ್ನೆಯ ವೇಳೆ ಕಮಲಾ ಹ್ಯಾರಿಸ್ ಹಾಗೂ ಪೋಲಿಷ್ ಅಧ್ಯಕ್ಷ ಆಂಡ್ರೆಜ್ ದುಡಾ ಜೋರಾಗಿ ನಕ್ಕಿದ್ದಾರೆ. ಆ ಬಳಿಕ ‘ಅಗತ್ಯವಿರುವ ಸ್ನೇಹಿತ, ನಿಜವಾಗಿಯೂ ಸ್ನೇಹಿತ’ ಎಂದು ಹ್ಯಾರಿಸ್ ಉತ್ತರಿಸಿದ್ದಾರೆ. ಈ ಕುರಿತು ಕಮಲಾ ಹ್ಯಾರಿಸ್ ಅವರೊಂದಿಗೆ ಚರ್ಚಿಸಿದ್ದಾಗಿ ಆಂಡ್ರೆಜ್ ದುಡಾ ತಿಳಿಸಿದ್ದಾರೆ.



Join Whatsapp