ಬೆಳಗಾವಿ: 2024ರ ವೇಳೆಗೆ ಕರ್ನಾಟಕದಲ್ಲೂ ಅಮೆರಿಕಕ್ಕೆ ಸರಿಸಮನಾಗಿ ಹೆದ್ದಾರಿಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಕೇಂದ್ರ ಭೂಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ತ್ವರಿತವಾಗಿ ಭೂಸ್ವಾಧೀನ ಮಾಡಿಕೊಟ್ಟರೆ, ಅಗತ್ಯ ಅನುಮತಿ ಮೊದಲಾದವುಗಳಲ್ಲಿ ಸಹಕರಿಸಿದರೆ ಕರ್ನಾಟಕದಲ್ಲೂ ಅಮೆರಿಕಕ್ಕೆ ಸರಿಸಮನಾಗಿ ಹೆದ್ದಾರಿಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.