ಕಾಬೂಲ್ ತೊರೆದ ಅಮೆರಿಕ ಸೇನೆ| ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ ತಾಲಿಬಾನ್

Prasthutha|

ಕಾಬೂಲ್: ಸೋಮವಾರ ಮಧ್ಯ ರಾತ್ರಿ ಅಮೆರಿಕ ಸೇನೆಯ ವಿಮಾನವು ಕಾಬೂಲ್ ನಿಂದ ಅಮೆರಿಕಕ್ಕೆ ಹಾರುತ್ತಲೇ ತಾವು ಈ ದೇಶ ತೊರೆದುದಾಗಿ ಹೇಳಿದೆ. ಅದರ ಬೆನ್ನಿಗೆ ತಾಲಿಬಾನಿಗರು ಅಫ್ಘಾನಿಸ್ತಾನದ ಸಂಪೂರ್ಣ ಸ್ವಾತಂತ್ರ್ಯವನ್ನು ಘೋಷಿಸಿದರು.

- Advertisement -

ತಾಲಿಬಾನ್ ವಕ್ತಾರ ಜಬೀಯುಲ್ಲಾ ಅವರು, 20 ವರುಷಗಳ ಬಳಿಕ ಅಮೆರಿಕದ ಸೇನೆಯು ನಮ್ಮ ದೇಶದಿಂದ ಜಾಗ ಖಾಲಿ ಮಾಡಿದೆ. ನಾವು ಈಗ ಸರ್ವತಂತ್ರ ಸ್ವತಂತ್ರರು ಎಂದು ಹೇಳಿದ್ದಾರೆ. ಅದರ ಬೆನ್ನಿಗೆ ಅಲ್ಲಲ್ಲಿ ಸ್ವಾತಂತ್ರ್ಯ ಸಂಭ್ರಮ ಆಚರಣೆ ಕಂಡು ಬಂತು.

 ‘ಜಗತ್ತು ಈಗ ಪಾಠ ಕಲಿತಿದೆ , ನಮಗೆ ಈಗ ಸಂಭ್ರಮಿಸುವ ಕ್ಷಣ’ ಎಂದು ರುಬೀ ಉಲ್ಲಾ ಮುಜಾಹಿದ್ ಹೇಳಿದರು.

- Advertisement -

ವೀಡಿಯೋ ವೀಕ್ಷಿಸಿ….

ಅಫ್ಘಾನಿಸ್ತಾನದಿಂದ ಅಮೆರಿಕದ ಜನರ ತೆರವು ಕಾರ್ಯಾಚರಣೆ ಸೋಮವಾರ ಮಧ್ಯರಾತ್ರಿಯ ಹೊತ್ತಿಗೆ ಮುಕ್ತಾಯಗೊಂಡಿರುವುದಾಗಿ ಅಮೆರಿಕ ಸರ್ಕಾರ ಘೋಷಿಸಿದೆ. ಅಮೆರಿಕದ ಸೇನಾ ಪಡೆಗಳೂ ಸಂಪೂರ್ಣವಾಗಿ ಅಫ್ಘಾನಿಸ್ತಾನ ತೊರೆದಿವೆ.



Join Whatsapp