ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದ ನ್ಯಾಯಾಧೀಶ

Prasthutha|

ಕ್ಯಾಲಿಫೋರ್ನಿಯಾ: ಊಟದ ವಿಚಾರವಾಗಿ ನಡೆದ ಜಗಳದಲ್ಲಿ ನ್ಯಾಯಾಧೀಶರೊಬ್ಬರು ಪತ್ನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.

- Advertisement -

ಪೊಲೀಸರು ನ್ಯಾಯಾಧೀಶರ ಮನೆಯನ್ನು ಪರಿಶೀಲಿಸಿದಾಗ ಸಾಕಷ್ಟು ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ವರದಿಗಳ ಪ್ರಕಾರ ನ್ಯಾಯಾಧೀಶರ ಮನೆಯಲ್ಲಿ 47 ಬಗೆಯ ಶಸ್ತ್ರಾಸ್ತ್ರಗಳಿದ್ದವು, 26,000 ಗುಂಡುಗಳು ಪತ್ತೆಯಾಗಿವೆ.

ಆರೆಂಜ್ ಕೌಂಟಿಯಾ ಸುಪೀರಿಯರ್ ಕೋರ್ಟ್​ ನ್ಯಾಯಾಧೀಶ ಜೆಫ್ರಿ ಫರ್ಗುಸನ್ ಮದ್ಯದ ಅಮಲಿನಲ್ಲಿ ಪತ್ನಿಯನ್ನು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ತಾನು ಉದ್ದೇಶಪೂರ್ವಕವಾಗಿ ಹತ್ಯೆ ಮಾಡಿಲ್ಲ ಎಂದು ನ್ಯಾಯಾಧೀಶ ನ್ಯಾಯಾಲಯದಲ್ಲಿ ಹೇಳಿದ್ದಾರೆ.

- Advertisement -

ನ್ಯಾಯಾಧೀಶರ ಪುತ್ರನೇ ತನ್ನ ತಾಯಿಯ ಸಾವಿನ ಕುರಿತು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ನ್ಯಾಯಾಧೀಶರ ಪತ್ನಿಗೆ 65 ವರ್ಷ ವಯಸ್ಸಾಗಿತ್ತು.

ನ್ಯಾಯಾಧೀಶ ಫರ್ಗುಸನ್ ಮತ್ತು ಅವರ ಪತ್ನಿ ಶೆರಿಲ್ ಅವರು ಹತ್ತಿರದ ರೆಸ್ಟೋರೆಂಟ್​ನಲ್ಲಿ ರಾತ್ರಿ ಊಟ ಮಾಡುವಾಗ ಜಗಳವಾಡಿದ್ದರು. ಕೋಪದ ಭರದಲ್ಲಿ ಪತ್ನಿಯ ಎದೆಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾರೆ.

ನ್ಯಾಯಾಧೀಶರಿಗೆ ಒಂದು ಮಿಲಿಯನ್ ಡಾಲರ್ ಮೊತ್ತದ ಮೇಲೆ ಜಾಮೀನು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್ 30ರಂದು ನಡೆಯಲಿದೆ. ಫರ್ಗುಸನ್ ಕೊಲೆಯನ್ನು ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದು ವಕೀಲರು ವಾದಿಸಿದ್ದಾರೆ. ಅವರಿಗೆ ಮದ್ಯಪಾನ ಮಾಡದಂತೆ ಕೋರ್ಟ್​ ಸೂಚನೆ ನೀಡಿದೆ.

Join Whatsapp