ವಾಷಿಂಗ್ಟನ್ : ಅಮೆರಿಕದ ಕಾನ್ಸಾನ್ ನ ದುಷ್ಕರ್ಮಿ ಮಹಿಳೆಯೊಬ್ಬಳಿಗೆ ಮರಣ ದಂಡನೆ ವಿಧಿಸಲಾಗಿದೆ. ಕಳೆದ 70 ವರ್ಷಗಳ ಬಳಿಕ ಇದೇ ಮೊದಲ ಬಾರಿ ಮಹಿಳೆಯೊಬ್ಬಳಿಗೆ ಅಲ್ಲಿ ಮರಣ ದಂಡನೆ ವಿಧಿಸಲಾಗಿದೆ. ಮಾರಕ ಇಂಜೆಕ್ಷನ್ ನೀಡುವ ಮೂಲಕ ಆಕೆಗೆ ಶಿಕ್ಷೆ ಜಾರಿಗೊಳಿಸಲಾಯಿತು.
ರಾತ್ರಿ 1:31ಕ್ಕೆ ಮಹಿಳೆ ಕೊನೆಯುಸಿರೆಳೆದಿದ್ದಾಳೆ. ಲೀಸಾ ಮಾಂಟ್ ಗೊಮೇರಿ ಎಂಬಾಕೆ ಶಿಕ್ಷೆಗೆ ಗುರಿಯಾದ ಮಹಿಳೆ.
2004ರಲ್ಲಿ 23 ವರ್ಷ ಗರ್ಭಿಣಿ ಬಾಬಿ ಜೊ ಸ್ಟಿನ್ನೆಟ್ ಎಂಬಾಕೆಯನ್ನು ಉಸಿರುಗಟ್ಟಿಸಿ ಕೊಂದು, ಆಕೆಯ ಗರ್ಭದಲ್ಲಿದ್ದ ಹೆಣ್ಣು ಮಗುವನ್ನು ಕತ್ತರಿಸಿ ತೆಗೆದ ಅಪರಾಧಕ್ಕಾಗಿ ಲೀಸಾಗೆ ಈ ಶಿಕ್ಷೆ ವಿಧಿಸಲಾಗಿತ್ತು.
ಅಮೆರಿಕದಲ್ಲಿ ಮರಣ ದಂಡನೆ ವಿಧಿಸುವುದಕ್ಕೆ ದೊಡ್ಡ ಮಟ್ಟದ ವಿರೋಧವಿರುವುದರಿಂದ, ಮರಣ ದಂಡನೆ ರದ್ದುಪಡಿಸಲು ಒತ್ತಾಯಿಸಿ ಜೈಲಿನ ಹೊರಗೆ ಪ್ರತಿಭಟನೆಗಳೂ ನಡೆದವು.