ರಷ್ಯಾ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಸಾವಿಗೆ ಅಮೆರಿಕ ಖಂಡನೆ: ಪುಟಿನ್ ಕ್ರೌರ್ಯತೆಗೆ ಸಾಕ್ಷಿ ಎಂದ ಕಮಲಾ ಹ್ಯಾರಿಸ್

Prasthutha|

ವಾಷಿಂಗ್ಟನ್: ರಷ್ಯಾದ ಜೈಲಿನಲ್ಲಿ ಬಂಧನದಲ್ಲಿದ್ದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಜೈಲಿನಲ್ಲಿ ಕುಸಿದು ಬಿದ್ದು ಸಾವನ್ನಪ್ಪಿರುವ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯದಿಂದ ವ್ಯಾಪಕ ಖಂಡನೆ, ವಿರೋಧ ವ್ಯಕ್ತವಾಗಿದೆ.

- Advertisement -

ನವಾಲ್ನಿಯ ಸಾವಿಗೆ ಪುಟಿನ್ ಕಾರಣ ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಶ್ವೇತಭವನದಿಂದ ಮಾಧ್ಯಮವನ್ನು ಉದ್ದೇಶಿಸಿ ಹೇಳಿದ್ದಾರೆ.

ರಶ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಕ್ರೂರತೆಗೆ ಇದು ಮತ್ತಷ್ಟು ಪುರಾವೆಯಾಗಿದೆ ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

- Advertisement -

1976ರ ಜೂನ್‌ 4ರಂದು ಹುಟ್ಟಿದ ನವಾಲ್ನಿ ರಷ್ಯಾದ ವಿಪಕ್ಷದ ಪ್ರಮುಖ ನಾಯಕ ಹಾಗೂ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಮುಖ್ಯ ರಾಜಕೀಯ ಎದುರಾಳಿ. 2021ರ ಫೆಬ್ರವರಿಯಲ್ಲಿ ವಿವಿಧ ಆರೋಪಗಳ ಮೇಲೆ ಬಂಧಿತರಾದ ನವಲ್ನಿಯನ್ನು ಮಾಸ್ಕೋದಿಂದ 235 ಕಿಲೋಮೀಟರ್ ದೂರದಲ್ಲಿರುವ ಮೆಲೆಖೋವ್‌ನಲ್ಲಿ ಜೈಲಿನಲ್ಲಿರಿಸಲಾಗಿತ್ತು. ಭ್ರಷ್ಟಾಚಾರ ವಿರೋಧಿ ಅಭಿಯಾನದ ಮೂಲಕ ರಷ್ಯಾದಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ನವಲ್ನಿ ಅವರನ್ನು ‘ಪುಟಿನ್ ಹೆಚ್ಚು ಭಯಪಡುವ ವ್ಯಕ್ತಿ’ ಎಂದು ವಾಲ್ ಸ್ಟ್ರೀಟ್ ಜರ್ನಲ್ ಬಣ್ಣಿಸಿತ್ತು.

ಅಲೆಕ್ಷಿ ನವಾಲ್ನಿ

Join Whatsapp