ಅಮೆರಿಕ | ಅಂತರ್ ಧರ್ಮೀಯ ಮಂಡಳಿಗೆ ಹಿಂದುತ್ವ ನಾಯಕನ ಆಯ್ಕೆ

Prasthutha|

ವಾಷಿಂಗ್ಟನ್: ಅಮೆರಿಕದ ಅಂತರ್ ಧರ್ಮಿಯ ಮಂಡಳಿಯಾದ ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ಸಂಸ್ಥೆಗೆ (DHS) ಭಾರತೀಯ ಮೂಲದ ಹಿಂದುತ್ವ ಪರ ಹಿರಿಯ ನಾಯಕನನ್ನು ನೇಮಕ ಮಾಡಲಾಗಿದೆ ಎಂದು ಲಂಡನ್ ಮೂಲದ Middle East Eye ಎಂಬ ನ್ಯೂಸ್ ವೆಬ್ ಸೈಟ್ ಬಹಿರಂಗಪಡಿಸಿದೆ.

- Advertisement -

ರಾಷ್ಟ್ರೀಯ ಸಮಸ್ಯೆಗಳ ಕುರಿತು ಅಮೆರಿಕ ಸರ್ಕಾರಕ್ಕೆ ಸಲಹೆ ನೀಡಲು ಸೆಪ್ಟೆಂಬರ್ ಅಂತ್ಯದಲ್ಲಿ DHS ನಿಂದ ನೇಮಕಗೊಂಡ ಚಂದ್ರು ಆಚಾರ್ಯ ಅವರು ಹಿಂದೂ ಸ್ವಯಂಸೇವಕ ಸಂಘದ (HSS-USA) ನಿರ್ದೇಶಕರಾಗಿದ್ದಾರೆ. ಈ ಸಂಘಟನೆ ಭಾರತೀಯ ಪ್ರಧಾನಿ ನರೇಂದ್ರ ಮೋದಿಯ ನೀತಿಗಳನ್ನು ಪದೇ ಪದೇ ಸಮರ್ಥಿಸಿಕೊಂಡಿದೆ.

HSS-USA ಜೊತೆಗಿನ ತನ್ನ ಸಂಬಂಧವನ್ನು ದೃಢಪಡಿಸಿದ ಆಚಾರ್ಯ ಅವರು, HSS-USA ಸಂಸ್ಥೆಯು RSS ಜೊತೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ.

- Advertisement -

DHS ಎಂಬ ಸಂಸ್ಥೆಯಲ್ಲಿ 25 ಸದಸ್ಯರ ನಂಬಿಕೆ ಆಧಾರಿತ ಭದ್ರತಾ ಮಂಡಳಿಯು ವಿವಿಧ ನಂಬಿಕೆಗಳ ನಾಯಕರನ್ನು ಒಳಗೊಂಡಿದೆ. ಪ್ರತಿಯೊಬ್ಬರ ಆರಾಧನೆಯ ಕೇಂದ್ರಗಳನ್ನು ಸಂರಕ್ಷಿಸಲು, ಸನ್ನದ್ಧತೆ ಮತ್ತು ನಂಬಿಕೆಗೆ ಸಂಬಂಧಿಸಿದ ವಿಷಯಗಳ ಕುರಿತು ಅಮೆರಿಕ ಸರ್ಕಾರದ ಕಾರ್ಯದರ್ಶಿಗೆ ಸಲಹೆ ನೀಡಲು ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ.

“HSS ಎಂಬುದು RSS ನ ಸಾಗರೋತ್ತರ ಅಂಗಸಂಸ್ಥೆಯಾಗಿದೆ. ಯಾವುದೇ ಧಾರ್ಮಿಕ ಸ್ವಾತಂತ್ರ್ಯ ಮಂಡಳಿಯಲ್ಲಿ HSS ನಂತಹ ಸಂಘಟನೆಗಳನ್ನು ಸೇರಿಸುವುದನ್ನು ನಾವು ದೃಢವಾಗಿ ವಿರೋಧಿಸುತ್ತೇವೆ.” ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. HSS ಸಂಸ್ಥೆಯು ಸುಮಾರು 40 ದೇಶಗಳಲ್ಲಿ ನೂರಾರು ಶಾಖೆಗಳನ್ನು ರಚಿಸಿದೆ ಎಂದು ತಿಳಿದುಬಂದಿದೆ.

1925 ರಲ್ಲಿ ಭಾರತದ ನಾಗಪುರದಲ್ಲಿ ರಚನೆಯಾದ RSS ಹಿಂದುತ್ವ ಪರ ಸಂಘಟನೆಯಾಗಿದ್ದು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡುವುದು ಇದರ ಗುರಿಯಾಗಿದೆ ಎಂದು ಅಮೆರಿಕದ ವಿದ್ವಾಂಸರು ಮತ್ತು ಕಾರ್ಯಕರ್ತರು ತಿಳಿಸಿದ್ದಾರೆ.



Join Whatsapp