ತಾಲಿಬಾನ್ ಜಯದ ಹಾದಿಗೆ ಅಮೆರಿಕ, ಮಿತ್ರ ಪಕ್ಷಗಳ ಸಹಾಯ!

Prasthutha|

ಮಿಲಿಟರಿ ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿ ತಾಲಿಬಾನ್‌ ಗಳು ಮಿಂಚಿನ ವೇಗದಲ್ಲಿ ಅಫ್ಘಾನಿಸ್ತಾನವನ್ನು ಆವರಿಸಿಕೊಂಡಿದ್ದನ್ನು ನೋಡಿ ಬಹಳ ಜನ ಮೂಗಿನ ಮೇಲೆ ಬೆರಳಿಟ್ಟರು. ಪಾಶ್ಚಾತ್ಯ ಮಾಧ್ಯಮಗಳು ತಾಲಿಬಾನ್ ಧೀರತನದ ಬಗ್ಗೆ ತಲೆಬರೆಹದ ಮೇಲೆ ತಲೆಬರೆಹ ಬರೆಯುತ್ತಿವೆ. 24 ಗಂಟೆಗಳ ಅವಧಿಯಲ್ಲಿ ತಾಲಿಬಾನಿಗರು ಕಾಬೂಲ್ ಕಬ್ಜಾ ಮಾಡಿದರು. ಅಧ್ಯಕ್ಷ ಅಶ್ರಫ್ ಘನಿ ಅಷ್ಟರೊಳಗೆ ತಜಕಿಸ್ತಾನಕ್ಕೆ ಪಲಾಯನ ಮಾಡಿದರು. ಮುಲ್ಲಾ ಅಬ್ದುಲ್ಲಾ ಘನಿ ಬರಾದಾರ್‌ ನೇತತ್ವದಲ್ಲಿ ಮಧ್ಯಾವಧಿ ಸರಕಾರ ರಚನೆಯಾಯಿತು.

- Advertisement -

ಘನಿ ಹೋರಾಟ ಮುಂದುವರಿಸಲು ಬಯಲಿಲ್ಲ. ಸೇನೆಯು ಆತನ ಭ್ರಷ್ಟ ಸರಕಾರವನ್ನು ನಂಬಿ ಕೂರಲು ಬಯಸಲಿಲ್ಲ. ಆದ್ದರಿಂದ ಬರಾದಾರ್ ನಿರ್ಗಮನವನ್ನು ತಡೆಯಲು ಅಲ್ಲಿ ಯಾರೂ ಇರಲಿಲ್ಲ. ಮಿಲಿಟರಿಯವರು ಹೊಸ ವ್ಯವಸ್ಥೆಗೆ ಹೊಂದಿಕೊಳ್ಳಲು ತಯಾರಾಗಿದ್ದರು. ಒಂದು ವಾರದ ಅವಧಿಯಲ್ಲಿ ತಾಲಿಬಾನಿಗರು ಅವರ ಆಧ್ಯಾತ್ಮಿಕ ನೆಲೆಯಾದ ಕಂದಹಾರ್ ಸಹಿತ 10 ಪ್ರಾಂತೀಯ ರಾಜಧಾನಿಗಳನ್ನು ವಶಪಡಿಸಿಕೊಂಡು, ಕಾಬೂಲ್ ಸುತ್ತುವರಿದಿದ್ದರು.

ಕಳೆದ ಮೂರು ದಶಕಗಳಿಂದ ಪಾಶ್ಚಾತ್ಯ ಸರಕಾರಗಳು ಮತ್ತು ಮಾಧ್ಯಮಗಳು ತಾಲಿಬಾನಿಗರನ್ನು ಇನ್ನಿಲ್ಲದಂತೆ ಮಾಡುವ ಪ್ರಚಾರದಲ್ಲಿ ತೊಡಗಿದ್ದವು. ಇತ್ತೀಚೆಗೆ ಅವುಗಳ ರಾಗ ಬದಲಾಗಿದೆ. ಕತ್ತಲೆಯ ಯುಗಕ್ಕೆ ವಾಪಸು ಎಂಬ ಶೀರ್ಷಿಕೆಯೊಂದಿಗೆ ಬೆದರಿದ, ತಲೆ ತಗ್ಗಿಸಿದ ಹುಲ್ಲೆಯಂಥ ಹೆಣ್ಣನ್ನು ತೋರಿಸಿ ಹೆಣ್ಣಿನ ಸ್ಥಾನ ತಾಲಿಬಾನ್ ಕೈಯಲ್ಲಿ ಎಂದು ಚಿತ್ರಿಸುವುದು ಪಾಶ್ಚಾತ್ಯರ ಖಯಾಲಿಯಾಗಿತ್ತು. ಇದು ಎಲ್ಲರ ಮನಸ್ಸಿನಲ್ಲಿ ಒಂದು ರೀತಿಯ ಭೀತಿ ಬಿತ್ತುವಂತಿತ್ತು. ಇನ್ನು ಮುಂದೆ ಸೀದಾ ಮದುವೆ ಇಲ್ಲ, ಒತ್ತಾಯದ ಮದುವೆ ಮಾತ್ರ, ಶಾಲೆ ಬಂದ್ ಆಗುತ್ತವೆ, ಗಾಳಿಪಟ ಹಾರಿಸುವಂತಿಲ್ಲ. ಏನೇನೋ ಅಪಪ್ರಚಾರಗಳು. ಇವುಗಳಲ್ಲಿ ವಿಮರ್ಶಾತ್ಮಕ ವಿವರಣೆ ಎಲ್ಲಾದರೂ ಇದೆಯೇ? ಹೀಗಿದ್ದಿದ್ದರೆ ನೋಡ ನೋಡುತ್ತಿದ್ದಂತೆಯೇ ತಾಲಿಬಾನಿಗರು ಎಂದು ವಿಜಯಯಾತ್ರೆ ಸಾಧಿಸುವುದು ಸಾಧ್ಯವಿತ್ತೆ? ಜನರ ಪ್ರತಿರೋಧ ಎಲ್ಲೂ ಏಕೆ ಕಾಣಿಸಲಿಲ್ಲ?

- Advertisement -

ನಿಜ, ಅಲ್ಲಿ ಹಿಂಸಾಚಾರ, ಶೋಷಣೆ ಇತ್ತು. ಆದರೆ ಅದು ಎರಡೂ ಕಡೆಯಿಂದಲೂ ನಡೆಯುತ್ತಿತ್ತು. ಅದು ಯುದ್ಧದ ಕರಿನೆರಳು. ದಾರಿಯಲ್ಲಿ ಬಿದ್ದ ಹೆಣ, ಗಾಯಗೊಂಡ ಒಂಟಿಯಾಗಿ ನಿಂತ ಮಗು. ಇಂಥ ಮನ ಕಲಕುವ ಫೋಟೋಗಳು. ಅಮೆರಿಕ ಬ್ರಿಟನ್ ಸೇನೆಯು ನಡೆಸಿದ ವಿಮಾನ ದಾಳಿ, ಶೆಲ್ ದಾಳಿ ಮೊದಲಾವುಗಳಿಂದಲೂ ಇವೆಲ್ಲ ಆಗಿವೆ. ನೀವು ತಾಲಿಬಾನರದ್ದು ಮಾತ್ರ ಜಗತ್ತಿಗೆ ತೋರಿಸಬಹುದು. ಆದರೆ ಸ್ಥಳೀಯರಿಗೆ ಯಾರ್ಯರಿಂದ ಹಾನಿ ಎಂಬುದು ತಿಳಿದೇ ತಿಳಿಯುತ್ತದೆ.

ಕೊನೆಯ ವಾರದ ಯುದ್ಧ ವಿರಾಮ ಇಲ್ಲವೇ ಅದರ ಬೆನ್ನಿಗೆ ತಾಲಿಬಾನ್ ಮುನ್ನಡೆ ಸಾಧಿಸಿದಾಗಲೇ ನಿಜವಾಗಿ ರಕ್ತಪಾತ ಕಡಿಮೆ ಆಗಿದೆ. ಯಾರೂ ಬಿದ್ದ ಹೆಣ ಎಣಿಸುವ ಮನೋಸ್ಥಿತಿಯಲ್ಲಿ ಇರಲಿಲ್ಲ. ನ್ಯಾಟೋ ಪಡೆ, ಅಮೆರಿಕ, ಬ್ರಿಟನ್ ಸೈನಿಕರು ಯಾರ್ಯಾರೋ ಹತರಾದರು. ಆದರೆ ಹೆಚ್ಚು ಹಾನಿಗೊಂಡವರು ಆ ನೆಲದ ಜನರು.

ತಾಲಿಬಾನಿಗರು ದಿಢೀರನೆ ಅಫ್ಘಾನ್ ಮೇಲೆ ಹೇಗೆ ಹಿಡಿತ ಸಾಧಿಸಿದರು? ಇದು ತೀರಾ ಸುಲಭದ ಹಾದಿಯೂ ಅಲ್ಲ, ಕಾರ್ಯಾಚರಣೆಯೂ ಆಗಿರಲಿಲ್ಲ. ಅಮೆರಿಕ ಸಂಯುಕ್ತ ಸಂಸ್ಥಾನವು ದಿಢೀರನೆ ಆಗಸ್ಟ್ 31ರೊಳಗೆ ತನ್ನೆಲ್ಲ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿ ಘೋಷಣೆ ಮಾಡಿದೆ. ಬೆನ್ನಿಗೇ ತನ್ನ ಬುಡವನ್ನು ಗಟ್ಟಿ ಬೇರು ಬಿಟ್ಟು ಬೇಗನೆ ಆವರಿಸಿ ಬಿಟ್ಟಿತು ತಾಲಿಬಾನ್. ತಾಲಿಬಾನಿಗರಿಗೆ ದೇಶದ ನಾನಾ ಕಡೆ ಹೆಚ್ಚಿನ ಜನ ಬೆಂಬಲ ಇದ್ದುದರಿಂದಲೇ ಬಹುರಾಷ್ಟ್ರೀಯ ಪಡೆಗಳ ಹೊಡೆತವನ್ನು ಎದುರಿಸಿ ಅದು ನಿಲ್ಲುವುದು ಸಾಧ್ಯವಾಯಿತು. ಅಮೆರಿಕ ಪೋಷಿತ ಬೆದರುಬೊಂಬೆ ಸರಕಾರಕ್ಕೆ ಅಲ್ಲಿ ಜನ ಬೆಂಬಲ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ.

ಅವರು ತಮ್ಮ ದೇಶದಲ್ಲಿ ತಮ್ಮವರ ಮತ್ತು ವಿದೇಶೀಯರ ವಿರುದ್ಧ ಹೋರಾಡುತ್ತ ನೆಲೆ ಉಳಿಸಿಕೊಳ್ಳಬೇಕಾಯಿತು. 2001ರಲ್ಲಿ ಓಡಿ ಹೋದ ಬಂಡುಕೋರರು ಈಗಿಲ್ಲ. ತಾಲಿಬಾನ್ ಚಳವಳಿ ಅದರದ್ದೇ ವೈವಿಧ್ಯತೆಯನ್ನು ಹೊಂದಿದೆ. ಅದರ ಕೆಲವು ನಾಯಕರು ಈಗಲೂ ತಮ್ಮ ಶ್ರೇಷ್ಟತೆ ಉಳಿಸಿಕೊಂಡಿದ್ದಾರೆ. ಹಲವು ತಾಲಿಬಾನ್ ಪ್ರಮುಖರು ತಮ್ಮ ಇಸ್ಲಾಮಿಕ್ ನಂಬಿಕೆಯೊಂದಿಗೆ ರಾಜಿ ಮಾಡಿಕೊಳ್ಳಲು ತಯಾರಿಲ್ಲ. ಹೆಚ್ಚಿನವರು ಈಗ ಕಠಿಣ, ಪ್ರೌಢ, ಬೆಳವಣಿಗೆ ಕಂಡಿರುವುದರೊಂದಿಗೆ ಇಂದಿನ ಜಾಗತಿಕ ನಿಲುವಿಗೆ ತಮ್ಮನ್ನು ಪ್ರಾಯೋಗಿಕವಾಗಿ ಒಡ್ಡಿಕೊಳ್ಳಲು ಸಿದ್ಧರಾದವರಾಗಿದ್ದಾರೆ.

ಮಾರ್ಚ್ 21ರ ಬಳಿಕ ಅಧ್ಯಕ್ಷ ಹಮೀದ್ ಕರ್ಜಾಯಿ ಪ್ರಾದೇಶಿಕ ಶಕ್ತಿಗಳು, ಬುಡಕಟ್ಟು ಜನರು ಇವರೊಡನೆ ಸಮನ್ವಯ ಸಾಧಿಸಿ ತನ್ನ ನೆಲೆ ಉಳಿಸಿಕೊಳ್ಳಲು ನೋಡಿದರು. 9/11ರ ಘಟನೆಯ ಬಳಿಕ ತಾಲಿಬಾನಿಗರೂ ಸಹ ನೆರೆ ದೇಶಗಳು, ಜನಾಂಗಗಳು ಎಲ್ಲರ ಜೊತೆಗೆ ಸಮನ್ವಯವು ತಮ್ಮ ಉಳಿವಿಗೆ ಅತ್ಯಗತ್ಯ ಎಂದು ತಿಳಿದೇ ವ್ಯವಹಾರ ಮಾಡಿದರು. ಈಗಲೂ ಅಷ್ಟೆ, ತಾಲಿಬಾನಿಗರು ಈಗಾಗಲೇ ಚೀನಾ, ರಷ್ಯಾ, ಟರ್ಕಿ, ಪಾಕಿಸ್ತಾನ, ಇರಾನ್ ಮತ್ತಿತರ ನೆರೆಯ ದೇಶಗಳ ಜೊತೆಗೆ ದೊಡ್ಡ ನಾಯಕರ ಮಟ್ಟದಲ್ಲೇ ಮೊದಲ ಸುತ್ತಿನ ಮಾತುಕತೆ ನಡೆಸಿ ಆಗಿದೆ.

ಇರಾನ್ ದೇಶವು ಅಫ್ಘಾನಿಸ್ತಾನದೊಂದಿಗಿನ ತನ್ನ 950ಕಿಮೀ ಗಡಿ ಭಾಗದಲ್ಲಿ ಬೇರೆ ಯಾವುದೇ ಹೊಸ ತಲೆನೋವು ಆಹ್ವಾನಿಸಲು ತಯಾರಿಲ್ಲ. ಇರಾನ್ ಈಗಾಗಲೇ ಅಮೆರಿಕದ ಜೊತೆಗೆ ನಾನಾ ಮಟ್ಟದ ಕದನದಲ್ಲಿದ್ದು ಅದು, ಕೊಲ್ಲಿ ದೇಶದಲ್ಲಿ ಒಂದು ನೆರಳು ಯುದ್ಧವನ್ನು ಸಷ್ಟಿಸಿದೆ. ಅಮೆರಿಕಕ್ಕಾದರೂ ಇರಾನ್ ಬೆದರಿಕೆ ಎದುರಿಸುವುದು ಇದ್ದೇ ಇದೆ. ಇರಾನಿಗೆ ತಾಲಿಬಾನ್ ನೆರೆಹೊರೆ ಒಳ್ಳೆಯದಿರಲಿ ಎಂಬ ಬಯಕೆ ಇದೆ.

2,640ಕಿಮೀ ಗಡಿಯನ್ನು ಪಾಕಿಸ್ತಾನವು ಅಫ್ಘಾನಿಸ್ತಾನದ ಜೊತೆಗೆ ಹೊಂದಿದ್ದು, ಅಣ್ವಸ್ತ್ರ ಹೊಂದಿರುವ, ಕಾಶ್ಮೀರದ ಗಡಿ ತಂಟೆ ಇರುವ ಭಾರತದ ಜೊತೆಗಿನ ತಕರಾರು ಅದಕ್ಕೆ ಆ ಕಡೆ ಬೇಕಾಗಿಲ್ಲ. ಚೀನಾದ 350ಕಿಮೀ ಉದ್ದ, ಆದರೆ ಬರೇ 15 ಕಿಮೀ ಅಗಲದ ವಕಾನ್ ಕಾರಿಡಾರ್ ಗಡಿಯಲ್ಲಿ ಮುಗಿಯುತ್ತದೆ. ಚೀನಾವು ಅಫ್ಘಾನಿಸ್ತಾನದ ಜೊತೆ 75 ಕಿಮೀ ಮಾತ್ರ ಗಡಿ ಹೊಂದಿದ್ದರೂ ಜಗತ್ತಿನ ಹೊಸ ಸೂಪರ್ ಪವರ್ ಆಗುವ ಹಾದಿಯಲ್ಲಿರುವ ಆ ದೇಶವು ನೆರೆಹೊರೆಯಲ್ಲಿ ಆದಷ್ಟು ಮಿತ್ರ ಶಕ್ತಿ ಬಲಪಡಿಸಿಕೊಳ್ಳುವ ಅನಿವಾರ್ಯತೆಯಲ್ಲಿದೆ.

ರಷ್ಯಾ ತನ್ನದೇ ಆದ ಸಮಸ್ಯೆಗಳನ್ನು ಹೊಂದಿದ್ದು ಅಫ್ಘಾನಿಸ್ತಾನದ ಜೊತೆ ಹೊಸ ಸಂಘರ್ಷಕ್ಕೆ ತಯಾರಿಲ್ಲ. ಹಿಂದಿನ ಸೋವಿಯತ್ ರಷ್ಯಾ 1979ರಲ್ಲಿ ಅಫ್ಘಾನಿಸ್ತಾನದ ಮೇಲೆ ದಾಳಿ ಮಾಡಿ 1999ರವರೆಗೆ ಅಲ್ಲಿ ಇತ್ತು. ಆಗ ಅಲ್ ಖೈದಾ ಹುಟ್ಟಿತು. ರಷ್ಯಾದ ಕಾರಣಕ್ಕೆ ಅಫ್ಘಾನಿಸ್ತಾನದತ್ತ ಬಂದ ಅಮೆರಿಕ, ಬ್ರಿಟನ್‌ಗಳು ಅಲ್ಲಿ ಸಾಮ್ರಾಜ್ಯಗಳ ಸ್ಮಶಾನವನ್ನು ಕಟ್ಟಿಕೊಂಡವು!

ಸುನ್ನಿ ತಾಲಿಬಾನಿಗರು ಶಿಯಾ ಇರಾನಿಯರೊಂದಿಗೆ ಸುಗಮ ಮಾತುಕತೆ ನಡೆಸುತ್ತಿರುವುದು ಅಂತಿಮವಾಗಿ ಈ ಎರಡು ಗುಂಪುಗಳ ನಡುವಣ ವೈಷಮ್ಯ ದೂರವಾಗುತ್ತಿರುವುದರ ದ್ಯೋತಕವಾಗಿದೆ. ಆದರೆ ಇರಾನಿನ ಹೊಸ ಗೆಳೆಯ ಸೌದಿ ಅರೇಬಿಯಾದ ಸಹಿತ ಹಲವರು ಇತರ ಬಗೆಗೆ ತೀರಾ ಸಂತುಷ್ಟರೇನೂ ಆಗಿಲ್ಲ. ಒಟ್ಟಾರೆ ಇರಾನಿನ ಶಿಯಾ ಮತ್ತು ವಹಾಬಿ ವಶೀಲಿಯ ರಾಜ್ಯದ ನಡುವಣ ಅಸಹ್ಯ ಪೈಪೋಟಿ ಕೊನೆಗೊಳ್ಳಲಿದೆ.

ಟರ್ಕಿಯ ಮಿತ್ರ ಸೇನೆಗಳು ಈಗಾಗಲೇ ತಾಲಿಬಾನಿಗರ ತಂಡ ಮಾತುಕತೆ ನಡೆಸುತ್ತಿರುವ ಸಿರಿಯಾ, ಲಿಬಿಯಾ, ಕತಾರ್‌ ಗಳಲ್ಲಿವೆ. ಕತಾರ್ ಈಗಾಗಲೇ ಅಫ್ಘಾನ್ ಜೊತೆ ಶಾಂತಿ ಮಾತುಕತೆ ಆರಂಭಿಸಿರುವುದರಿಂದ ಅದರ ವಿರುದ್ಧ ಇರುವ ರಿಯಾದ್ ಸ್ವಲ್ಪಮುನಿಸಿಕೊಂಡಿದೆ.

ಇದನ್ನೆಲ್ಲ ನೋಡಿ ಅಫ್ಘಾನಿಸ್ತಾನವು ಜಿಹಾದಿಗಳ ಆಟದ ಮೈದಾನ ಆಗುವುದೋ, ಉಗ್ರರ ಚುಂಬಕ ಆಗುವುದೋ ಮುಂದೆ ಗೊತ್ತಾಗಬೇಕು. ಒಮ್ಮೆ ಮೂಲೆಗೆ ಬಿದ್ದಿದ್ದ ಅಫ್ಘಾನಿಸ್ತಾನವು ನಾನಾ ಭಾಗಗಳೊಂದಿಗೆ ವ್ಯಾಪಾರ ವೃದ್ಧಿಸಿಕೊಳ್ಳುತ್ತಿದೆ. ಆದ್ದರಿಂದ ಪಾಶ್ಚಾತ್ಯ ದೇಶಗಳು ಈಗ ಒಂದು ದೊಡ್ಡ ಹೆಜ್ಜೆ ಹಿಂದೆ ಸರಿದು ಎರಡು ದಶಕಗಳಿಂದ ಹಾಳು ಮಾಡಿದ ದೇಶಕ್ಕೆ ಮಾನವೀಯ ನೆಲೆಯಲ್ಲಿ ಸಹಾಯ ಮಾಡಿ, ಬೆಂಬಲ ನೀಡಬೇಕಾಗಿದೆ.

2001ರಲ್ಲಿ ಅಲ್ ಖೈದಾ ಸಂಬಂಧದೊಡನೆ ಬಂದ ತಾಲಿಬಾನಿಗರು ಅತಿಥಿಗಳಂತೆ ಕಾಣಿಸಿಕೊಂಡು ದಣಿಗಳಾದರು. ಆದ್ದರಿಂದ ತಾಲಿಬಾನಿಗರು ಮುಂದೆ ಯಾರನ್ನು ಅತಿಥಿಯಾಗಿ ಕರೆಯಬೇಕು ಎಂದು ತೀರ್ಮಾನಿಸುವಾಗ ಹುಶಾರಾಗಿರುತ್ತದೆ. ಇವುಗಳ ಮೇಲೆ ನೋಡಿದರೆ ತಾಲಿಬಾನ್ ಉಗ್ರವಾದದ ರಫ್ತು ನಡೆಸಿಲ್ಲ, ಬೇರೆ ದೇಶಗಳ ಮೇಲೆ ದಾಳಿ ಸಹ ಮಾಡಿಲ್ಲ. ಮುಂದೆ ಪಾಶ್ಚಾತ್ಯ ದೇಶಗಳಿಗೆ ಉಗ್ರ ರಫ್ತು ಮಾಡೀತೆ?

ಅಮೆರಿಕದ ಟ್ರೇಡ್ ಸೆಂಟರ್ ಉರುಳಿಸಿದ 9/11 ವಿಮಾನ ಹೈಜಾಕ್‌ ನಲ್ಲಿ ಯಾರಾದರೂ ಅಫ್ಘಾನಿ ಇದ್ದರೆ, ಯುಎಸ್ ಮರೆತರೂ, ಅದರಲ್ಲಿ ಇದ್ದ ಉಗ್ರರೆಲ್ಲ ಸೌದಿಗಳು. ಇದನ್ನು ಮರೆತು ಪತ್ರಕರ್ತರು ಉಗ್ರರು ಎಂದರೆ ತಾಲಿಬಾನಿಗರು ಎಂದು ಬರೆಯುತ್ತಾರೆ. ಅವರ ವಿಶಿಷ್ಟ ಉಡುಗೆ ತೊಡುಗೆ. ಗಡ್ಡದಲ್ಲಿ ಇಸ್ಲಾಫೋಬಿಯಾ ಯಾಕೆ ಕಾಣುತ್ತಾರೆ? ತಾಲಿಬಾನಿಗಳ ಮುಖ್ಯ ಕಾರ್ಯಗಳಲ್ಲಿ ದಾಯೀಸ್ ಬೇರುಗಳನ್ನು ತನ್ನ ಗಡಿಯಿಂದ ಹೊರಹಾಕುವುದು ಇದ್ದರೂ ಇರಬಹುದು. ರಾಜಕಾರಣಿ ಇಲ್ಲವೇ ಪತ್ರಕರ್ತರು ಎರಡು ಬಣಗಳ ನಡುವೆ ಹೋಲಿಕೆ ಕಾಣುವುದಾದರೆ ಅದು ಕೆಲಸದ ಸರಿಯಾದ ದಾರಿಯಲ್ಲಿ ಇದ್ದಾರೆಂದು ಅರ್ಥ. ಪಾಶ್ಚಾತ್ಯರು ಅಫ್ಘಾನಿಸ್ತಾನದಲ್ಲಿ ಅತಿ ಭ್ರಷ್ಟ ಸರಕಾರವನ್ನು ನೀಡಿ ಮಾಡಿದ ಸಾಧನೆ ಏನು?

ಯುಎಸ್ ತನ್ನ ಈ ವಿಫಲ ಮಿಲಿಟರಿ ದಾಳಿಗೆ ಮೂರು ಟ್ರಿಲಿಯನ್ ಡಾಲರ್ ವ್ಯಯಿಸಿದೆ. ಹಲವು ಸಹಾಯ ಧನ ನೀಡಲಾಯಿತು. ಅಶ್ರಫ್ ಘನಿ ಕಾಲದಲ್ಲಿ ಅದನ್ನು ಯಾರ್ಯಾರೋ ತಿಂದು ಹಾಕಿದರು. ಅಮೆರಿಕವು ಅಫ್ಘಾನ್ ಸೇನೆಗೆ ನೀಡಿದ ಶಸ್ತ್ರಾಸ್ತ್ರಗಳು ಈಗ ತಾಲಿಬಾನಿಗರ ಕೈ ಸೇರಿವೆ. ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್ ಸಹ ಅಫ್ಘಾನಿಸ್ತಾನದಲ್ಲಿ ಸಾಕಷ್ಟು ಹಣ ಪುಡಿ ಮಾಡಿವೆ. ಮತ್ತೊಮ್ಮೆ ತಾಲಿಬಾನಿಗಳು ಮರಳಿದರೆ ಆ ದೇಶವನ್ನು ಜಗತ್ತಿನಲ್ಲಿ ಒಂಟಿ ಮಾಡುವುದಾಗಿ ಯುರೋಪಿಯನ್ ಒಕ್ಕೂಟ ಬೆದರಿಕೆ ಹಾಕಿತ್ತು. ತಾಲಿಬಾನ್ ಬಂದರೆ ಅಲ್ ಖೈದಾ ಬೆಳೆಯುತ್ತದೆ ಎಂದ ಯುರೋಪಿಯನ್ ಒಕ್ಕೂಟ, ಜನಾಂಗೀಯತೆಯನ್ನು ತನ್ನ ನೆಲದಲ್ಲೇ ತಡೆಯಲು ವಿಫಲವಾಯಿತು. ಎಲ್ಲಕ್ಕಿಂತ ದಿಗ್ಭ್ರಮೆಯ ಹೇಳಿಕೆ ಅಮೆರಿಕಾಧ್ಯಕ್ಷ ಜೋ ಬೈಡನ್‌ ರದ್ದು. ಅವರವರಲ್ಲಿ ಜಗಳವಾಡುವವರು, ಅವರ ದೇಶಕ್ಕಾಗಿ ಜಗಳವಾಡಲಿ! ಅಮೆರಿಕದ ನೈತಿಕ ಪೋಲೀಸುಗಿರಿ ಬಯಸುವವರಿಗೆಲ್ಲ ಇದು ಪಾಠವಾಗಲಿ. ನಾವು ಬಾಂಬು ಹಾಕಿದೆವು, ದಾಳಿ ಮಾಡಿದೆವು, ನಿಮ್ಮ ದೇಶವನ್ನು ಹಿಡಿದೆವು, ಈಗ ನಾವು ಅಲ್ಲಿ ಮಾಡಿದ ಹಾನಿಯನ್ನು ಸರಿಮಾಡಲು ಯಾರಿಗಾದರೂ ಬಿಟ್ಟು ಬರಲೇ ಬೇಕು ಎಂಬುದೇ ಯುಎಸ್ ಸಂದೇಶವಾಗಿದೆ. ಬಹು ಹಿಂದೆಯೇ ಪ್ರಾಜ್ಞರು ಹೇಳಿದ್ದರು, ಅಫ್ಘಾನಿಸ್ತಾನಕ್ಕೆ ಅಮೆರಿಕ ಪರಿಹಾರ ಅಲ್ಲ, ಒಂದು ಸಮಸ್ಯೆ ಅಷ್ಟೆ. ಅಮೆರಿಕ ಅಫ್ಘಾನಿಸ್ತಾನದಲ್ಲಿ ಇದ್ದಾಗ ಅಲ್ಲಿಗೆ ಹೋದವರಿಗೆ ಕಂಡುದು ಎಲ್ಲೆಡೆ ಅಸಹ್ಯ ಎನಿಸುವಷ್ಟು ನೀಲಿ ಬುರ್ಕಾಗಳು. ಅಮೆರಿಕದ ಸಾಮ್ರಾಜ್ಯವಾದ ಈ ರೀತಿ ಹರಡಿದ್ದು ಎಷ್ಟು ಅಸಹ್ಯ. ಅಮೆರಿಕದ ಸೇನೆ ವಾಪಸು ಹೋಗಿದ್ದು ತಾಲಿಬಾನರಿಗೆ ನೇರ ಅಧಿಕಾರ ಸಿಕ್ಕಿತು ಎಂದು ಯಾರೂ ತಿಳಿಯಬೇಕಾಗಿಲ್ಲ. ಅವರು ವೇಗವಾಗಿ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ. ಅವರಿಗೆ ಅಫ್ಘಾನಿಸ್ತಾನದಲ್ಲಿ ಮೊದಲ ಸ್ಥಾನ ದಕ್ಕಿದೆ. ನಾಶಗೊಂಡ ದೇಶವನ್ನು ಸರಿಗಟ್ಟುವುದರಲ್ಲಿ ಅವರ ಯಶಸ್ಸು ಇರುತ್ತದೆ.



Join Whatsapp