ಸಾರ್ವಜನಿಕ ಪ್ರದೇಶದಲ್ಲಿ ತುಂಡುಡುಗೆ: ದುಬೈನಲ್ಲಿ ಉರ್ಫಿ ಜಾವೇದ್ ಅರೆಸ್ಟ್

Prasthutha|

ದುಬೈ: ಸಾರ್ವಜನಿಕ ಪ್ರದೇಶದಲ್ಲಿ ‘ಅಂಗಾಂಗ ಪ್ರದರ್ಶನ ಮಾಡುವ’ ಬಟ್ಟೆ ಧರಿಸಿ ಚಿತ್ರೀಕರಣ ಮಾಡಿದ ನಟಿ ಉರ್ಫಿ ಜಾವೇದ್ ಅವರನ್ನು ದುಬೈ ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -


ತಮ್ಮ ಮುಂಬರುವ ಚಿತ್ರೀಕರಣಕ್ಕಾಗಿ ಉರ್ಫಿ ಅವರು ಯುಎಇಗೆ ತೆರಳಿದ್ದರು. ಕಳೆದೊಂದು ವಾರದಿಂದ ಅಲ್ಲಿಯೇ ಇರುವ ಅವರು, ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚಿತ್ರಗಳನ್ನು ಹಂಚಿಕೊಂಡಿದ್ದರು. ‘ಸಾರ್ವಜನಿಕ ಪ್ರದೇಶದಲ್ಲಿ ಧರಿಸಲು ಅವಕಾಶ ಇಲ್ಲದಿರುವ ಬಟ್ಟೆ‘ಯನ್ನು ಧರಿಸಿ ಚಿತ್ರೀಕರಣ ಮಾಡುತ್ತಿದ್ದರು. ಹೀಗಾಗಿ ವಿಚಾರಣೆ ನಡೆಸಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಉರ್ಫಿ ಅವರು ಧರಿಸಿದ ಬಟ್ಟೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ. ಆದರೆ ಅವರು ತೆರದ ಪ್ರದೇಶದಲ್ಲಿ ಚಿತ್ರೀಕರಣ ಮಾಡಿದ್ದು ಸಮಸ್ಯೆ ಉಂಟು ಮಾಡಿದೆ‘ ಎಂದು ವರದಿಯಲ್ಲಿ ಹೇಳಲಾಗಿದೆ.

Join Whatsapp