2016 ರ ಸೇನಾ ಕ್ರಾಂತಿಯ ಹಿಂದೆ ಈ ರಾಷ್ಟ್ರವಿದೆಯೆಂದ ಟರ್ಕಿ!

Prasthutha|

- Advertisement -

ಅಂಕಾರಾ: 2016 ರಲ್ಲಿ ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಬ್ ಎರ್ದೋಗನ್ ವಿರುದ್ಧದ ವಿಫಲ ದಂಗೆಯ ಹಿಂದೆ ಅಮೇರಿಕಾದ ಕೈವಾಡವಿತ್ತು ಎಂದು ಟರ್ಕಿಯ ಗೃಹ ಸಚಿವರು ಆಘಾತಕಾರಿ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಟರ್ಕಿಯ ದಿನಪತ್ರಿಕೆ ಹುರಿಯತ್‌ಗೆ ನೀಡಿದ ಸಂದರ್ಶನದಲ್ಲಿ ಟರ್ಕಿಯ ಗೃಹ ಸಚಿವ ಸುಲೈಮಾನ್ ಸುಹೈಲ್,ಪೆನ್ಸಿಲ್ವೇನಿಯಾ ಮೂಲದ ಇಸ್ಲಾಮಿಸ್ಟ್ ಬೋಧಕ ಮತ್ತು ಉದ್ಯಮಿ ಫತಹುಲ್ಲಾ ಗುಲಾನ್ ಅವರನ್ನು ಬಳಸಿ ಅಮೇರಿಕಾ ಸೇನಾ ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ. ದಂಗೆ ಯತ್ನವನ್ನು ಯುಎಸ್ ನಿಯಂತ್ರಿಸಿದೆ ಮತ್ತು ವಾಷಿಂಗ್ಟನ್‌ನ ಆದೇಶದ ಮೇರೆಗೆ ಫತಾಹುಲ್ಲಾ ಗುಲಾನ್‌ರ ತಂಡ ಇದನ್ನು ನಿರ್ವಹಿಸಿದೆ ಎಂದು ಸುಲೈಮಾನ್ ಸುಹೈಲ್ ಆರೋಪಿಸಿದ್ದಾರೆ.

ಅದೇ ವೇಳೆ, ಯು.ಎಸ್. ಸ್ಟೇಟ್ ಡಿಪಾರ್ಟ್ಮೆಂಟ್ ಸುಹೈಲ್ ಅವರ ಆರೋಪಗಳು ಆಧಾರರಹಿತ ಮತ್ತು ಬೇಜವಾಬ್ದಾರಿಯಾಗಿದೆ ಎಂದು ಪ್ರತಿಕ್ರಿಯಿಸಿದೆ. ಟರ್ಕಿ ಸಚಿವರ ಆರೋಪದಿಂದ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿದೆ. ನ್ಯಾಟೋ ಮೈತ್ರಿಯಲ್ಲಿ ಟರ್ಕಿ ಅಮೆರಿಕದೊಂದಿಗೆ ಉತ್ತಮ ಸಂಬಂಧವನ್ನು ಬಯಸುತ್ತಿದೆ ಎಂಬ ವರದಿಗಳ ಮಧ್ಯೆ ಈ ವಿವಾದವು ಉಲ್ಬಣಗೊಂಡಿದೆ. ಟರ್ಕಿಯ ಅಧಿಕಾರಿಗಳಿಂದ ಕಪ್ಪುಪಟ್ಟಿಗೆ ಸೇರಿಸಲ್ಪಟ್ಟ ಗುಲಾನ್‌ನನ್ನು ಹಸ್ತಾಂತರಿಸಲು ಅಮೇರಿಕಾ ಒಪ್ಪುತ್ತಿಲ್ಲ. ಫತಾಹುಲ್ಲಾ ಅವರನ್ನು ಹಸ್ತಾಂತರಿಸಲು ಟರ್ಕಿಯ ಕೈಯಲ್ಲಿ ಸಾಕಷ್ಟು ಪುರಾವೆಗಳಿಲ್ಲ ಎಂದು ಅಮೆರಿಕ ಹೇಳುತ್ತಿದೆ.

- Advertisement -

2016 ಜುಲೈ 15 ರಂದು ಟರ್ಕಿಯಲ್ಲಿ ಸೇನಾ ದಂಗೆ ಪ್ರಯತ್ನ ನಡೆದಿತ್ತು. ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು ಮತ್ತು ಟ್ಯಾಂಕ್‌ಗಳನ್ನು ಹೊಂದಿರುವ ಸೈನಿಕರು ಸರ್ಕಾರಿ ಸಂಸ್ಥೆಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದರು. ವಿದೇಶದಲ್ಲಿದ್ದ ಉರ್ದುಗನ್ ಶೀಘ್ರದಲ್ಲೇ ಟರ್ಕಿಗೆ ಮರಳಿ ಜನರನ್ನು ಬೀದಿಗಿಳಿಯುವಂತೆ ಕೇಳಿಕೊಂಡು ಟರ್ಕಿಯ ಜನರಿಂದಲೇ ಸೇನಾ ದಂಗೆಯನ್ನು ಸೋಲಿದ್ದರು. ಈ ಘಟನೆಯಲ್ಲಿ ಸೈನಿಕರು ಮತ್ತು ನಾಗರಿಕರು ಸೇರಿದಂತೆ 251 ಜನರು ಸಾವನ್ನಪ್ಪಿದ್ದರು ಮತ್ತು ಸಾವಿರಾರು ಜನರು ಗಾಯಗೊಂಡಿದ್ದರು. ಉರ್ದುಗಾನ್ ನ ಹಳೆಯ ಮಿತ್ರನಾದ ಫತಹುಲ್ಲಾ ಗುಲಾನ್ ದಂಗೆಯ ಸಂಚು ರೂಪಿಸಿದ್ದಾನೆ ಎಂದು ಟರ್ಕಿ ಆರೋಪಿಸಿದೆ.



Join Whatsapp