ಬೆಂಗಳೂರು: ದೇಶಾದ್ಯಂತ ನಡೆಸಲಾಗುವ UPSC ಪರೀಕ್ಷೆಗಳನ್ನು ಕನ್ನಡದಲ್ಲೇ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಇಂದು ನಡೆಸುತ್ತಿರುವ ಟ್ವಿಟ್ಟರ್ ಅಭಿಯಾನ ಟ್ರೆಂಡಿಂಗ್ ಆಗಿದೆ. ಮಾತ್ರವಲ್ಲ ಈ ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯಲು ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡದಲ್ಲಿ UPSC #UPSCInKannada ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಇಂದು ಬೆಳಿಗ್ಗೆ ಆರಂಭವಾದ ಆನ್ ಲೈನ್ ಟ್ವಿಟ್ಟರ್ ಅಭಿಯಾನಕ್ಕೆ ವ್ಯಾಪಕ ಜನ ಬೆಂಬಲ ವ್ಯಕ್ತವಾಗಿದೆ.
ಈ ಮಧ್ಯೆ ಕನ್ನಡ ಪರ ಸಂಘಟನೆ ಮತ್ತು ಕನ್ನಡಿಗರು ಟ್ವಿಟ್ಟರ್ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಮನವಿ ಮಾಡಿದೆ.
ಯು.ಪಿ.ಎಸ್.ಸಿ ಪ್ರತಿ ಹಂತದಲ್ಲೂ ಕನ್ನಡದಲ್ಲೇ ವ್ಯವಸ್ಥೆಗೊಳಿಸಬೇಕೆಂದು ಕರವೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಮಾತ್ರವಲ್ಲ ಯು.ಪಿ.ಎಸ್.ಸಿ ನೆಪದಲ್ಲಿ ಕನ್ನಡಿಗರ ಮೇಲೆ ಆಂಗ್ಲಭಾಷೆ ಮತ್ತು ಹಿಂದಿ ಹೇರಿಕೆ ವಿರುದ್ಧ ರಾಜ್ಯಾಧ್ಯಕ್ಷ ಟಿ.ನಾರಾಯಣ ಗೌಡ ಅವರು ಅಕ್ರೋಶ ವ್ಯಕ್ತಪಡಿಸಿದ್ದಾರೆ