ಮೀರತ್ ನಲ್ಲಿ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿದ ಹಿಂದುತ್ವವಾದಿ ಗುಂಪು

Prasthutha|

ಮೀರತ್: ಹಿಂದೂ ಜಾಗರಣೆ ಮಂಚ್ ನ ಪದಾಧಿಕಾರಿಗಳು ಯುವ ಜೋಡಿಗೆ ಹಲ್ಲೆ ನಡೆಸಿದ ಪ್ರಸಂಗ ಉತ್ತರಪ್ರದೇಶದ ಮೀರತ್ ಜಿಲ್ಲೆಯ ಸಾಕೇತ್ ಎಂಬ ಪ್ರದೇಶದಿಂದ ವರದಿಯಾಗಿದೆ.

ಮೀರತ್ ನ ಗೋಲ್ ಮಾರ್ಕೆಟ್ ಪಾರ್ಕ್ ನಲ್ಲಿ ತನ್ನ ಸ್ನೇಹಿತ ಸಲ್ಮಾನ್ ನನ್ನು ಭೇಟಿಯಾದ ಹುಡುಗಿಯನ್ನು ತರಾಟೆಗೆ ತೆಗೆದುಕೊಂಡ ಹಿಂದುತ್ವವಾದಿಗಳು, ಇಬ್ಬರಿಗೂ ಹಲ್ಲೆ ನಡೆಸಿದ ನಂತರ ಹುಡುಗಿಯ ಚಪ್ಪಲಿಯಿಂದ ಆತನ ಮೇಲೆ ಹಲ್ಲೆ ನಡೆಸುವಂತೆ ಬಲವಂತಪಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

- Advertisement -

ಘಟನೆಗೆ ಸಂಬಂಧಿಸಿದಂತೆ ಹುಡುಗಿಯ ತಾಯಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಪೊಲೀಸರು ಎರಡು ಕಡೆಯವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದು, ಸ್ವ-ಇಚ್ಛೆಯಿಂದ ಹುಡುಗನ ಜೊತೆ ತೆರಳಿದ್ದೇನೆ ಎಂದು ಆಕೆ ಪೊಲೀಸರಲ್ಲಿ ತಿಳಿಸಿದ್ದಾಳೆ.

ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

- Advertisement -